11:12 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಮಲೆನಾಡ ಕಾಶ್ಮೀರ ಬಸರೀಕಟ್ಟೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಸಂಪನ್ನ: ಭುವನೇಶ್ವರಿ ದೇವಿಯ ವೈಭವದ ಮೆರವಣಿಗೆ

28/11/2023, 19:39

ಶಶಿ ಬೆತ್ತದಕೊಳಲು ಕೊಪ್ಪ

info.reporterarnataka@gmail.com

ಕೊಪ್ಪ(reporterkarnataka.com): ಕನ್ನಡ ರಾಜ್ಯೋತ್ಸವ ಆಚರಣ ಸಮಿತಿ “ಗೆಳೆಯರ ಬಳಗ” ಬಸರೀಕಟ್ಟೆ ಇವರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಸೋಮವಾರದಂದು ಆಚರಿಸಲಾಯಿತು.
ಬಸರೀಕಟ್ಟೆ ಅಂದ್ರೆನೆ ಚಂದದ ಊರು ಮಲೆನಾಡ ಕಾಶ್ಮೀರ ಅಂತಾನೆ ಹೇಳ್ತಾರೆ ಪ್ರವಾಸಿಗರು. ಭೂಲೋಕದ ಸ್ವರ್ಗ ಅಂತಾನೂ ಕರೆಸಿಕೊಳ್ಳುವ ಬಸರೀಕಟ್ಟೆಯಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಅಂದ್ರೆ ಕೇಳ್ಬೇಕ?
ಅಬ್ಬಬ್ಬಾ ನೋಡೋಕೆ ಎರಡು ಕಣ್ಣುಗಳು ಸಾಲದಾಯ್ತು.
ಕನ್ನಡ ಮನಸ್ಸುಗಳನ್ನು ಒಂದೆಡೆ ನೋಡಿ ಕನ್ನಡಾಂಬೆ ಕೂಡ ಒಮ್ಮೆ ಖುಷಿ ಪಟ್ಟಂತೆ ಅನ್ನಿಸಿ ಬಿಡ್ತು..


ಬೆಳಗ್ಗೆ ನಡೆದ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಶಾಲಾ ಮಕ್ಕಳು ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಕನ್ನಡ ತಾಯಿಗೆ ಜೈಕಾರ ಹಾಕಿದರು. ಮೆರವಣಿಗೆಯಲ್ಲಿ ವಿವಿಧ ವೇಷಗಳ ನೃತ್ಯವೂ ಇತ್ತು. ಈ ಭಾರೀಯ ಭುವನೇಶ್ವರಿ ದೇವಿಯ ಸ್ತಬ್ಧಚಿತ್ರವಂತು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ನಂತರ ಸಭಾ ಕಾರ್ಯಕ್ರಮವೂ ಪ್ರಧಾನ ಸಂಚಾಲಕ ವಿಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಊರಿನ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಭಾರೀ ಊರಿಗೆ ಕೀರ್ತಿ ತಂದ ಮಕ್ಕಳನ್ನು ವಿಶೇಷವಾಗಿ ಸನ್ಮಾನಿಸಿ ಅವರ ಸಾಧನೆಯನ್ನು ಕೊಂಡಾಡಲಾಯಿತು..
ಬಸರೀಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಸ್ಸಾಂ ಮೂಲದ ವಿದ್ಯಾರ್ಥಿನಿ ಕನ್ನಡ ಬಾವುಟ ಮತ್ತು ದೇಶದ ಬಾವುಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು.

ಇತ್ತೀಚಿನ ಸುದ್ದಿ

ಜಾಹೀರಾತು