6:00 PM Saturday10 - May 2025
ಬ್ರೇಕಿಂಗ್ ನ್ಯೂಸ್
Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಶ್ರೀಮಂತ ಮನಸ್ಸಿನ ಧೀಮಂತ ವ್ಯಕ್ತಿತ್ವದ ಎಸ್. ಮಹಾಬಲೇಶ್ವರ ಭಟ್ ಅವರ 100ರ ನೆನಪು ಕಾರ್ಯಕ್ರಮದಲ್ಲಿ ನುಡಿ ನೆನಪು

26/11/2023, 22:26

ಬಂಟ್ವಾಳ(reporterkarnataka.com): ಬಂಟ್ವಾಳ ತಾಲೂಕು ಹಾಗೂ ನರಿಂಗಾನ ಪರಿಸರದಲ್ಲಿ ನಡೆಯುತ್ತಿದ್ದ ಕೋಮು ಗಲಭೆಗಳನ್ನು ಪ್ರಾರಂಭದಲ್ಲಿಯೇ ಚಿವುಟಿ ಹಾಕಿ ಸೌಹಾರ್ದತೆ ಬೆಳೆಸಲು ಕಾರಣೀಕರ್ತರಾದವರು ಎಸ್.ಮಹಾಬಲೇಶ್ವರ ಭಟ್. ವಿದ್ಯಾರ್ಥಿ ದೆಸೆಯಿಂದಲೇ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಿ ಎಸ್.ವಿ.ಘಾಟೆ, ಸಿಂಪ್ಸನ್ ಸೋನ್ಸ್, ಎ.ಶಾಂತಾರಾಮ ಪೈ, ಬಿ.ವಿ.ಕಕ್ಕಿಲ್ಲಾಯರ, ಲಿಂಗಪ್ಪ ಸುವರ್ಣ, ದಾಸ ಸೇರಿದಾಗ, ದಾಸಶ್ರೇಷ್ಠರಾದ ಮಾಸ್ಟರ್, ಎ.ಶಿವಶಂಕರ ರಾವ್, ಎಸ್.ಆರ್ ಮುಂತಾದ ಘಟಾನುಘಟಿ ನಾಯಕರ ಸಂಪರ್ಕ ಬೆಳೆಸಿ ಅವರ ಸದಾಶಯದಂತೆ ಸಮ ಸಮಾಜದ ಕನಸು ಕಂಡು ಚಳುವಳಿಯಲ್ಲಿ ಧುಮುಕಿದರು. 1942 ರ ಕ್ವಿಟ್ ಇಂಡಿಯಾ ಚಳುವಳಿ ಮತ್ತು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಂಧನಕ್ಕೆ ಒಳಗಾಗಿದ್ದ ಒಬ್ಬ ಧೀಮಂತ ಸ್ವಾತಂತ್ರ್ಯ ಸೇನಾನಿ ಎಂದು ಮಂಗಳೂರಿನ ತಜ್ಞ ವೈದ್ಯರು ಹಾಗೂ ಚಿಂತಕ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.


ಅವರು ಇಂದು ಬಂಟ್ವಾಳದ ಎ.ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ಜರುಗಿದ ಧೀಮಂತ ಕಮ್ಯೂನಿಸ್ಟ್ ನಾಯಕ ಎಸ್.ಮಹಾಬಲೇಶ್ವರ ಭಟ್ ರವರ ನೂರರ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹಾಗೂ ಸಾಮರಸ್ಯಕ್ಕೆ ಕಿಂಚಿತ್ತೂ ಕೊಡುಗೆ ನೀಡದ ಶಕ್ತಿಗಳಿಂದ ದೇಶ ಪ್ರೇಮದ ಪಾಠ ಕೇಳುವ ದುರಂತ ಒದಗಿದೆ. ಒಂದು ಕಾಲದಲ್ಲಿ ಸಾಮರಸ್ಯದಲ್ಲಿ ಬದುಕಲು ಪೂರಕವಾದ ಎಲ್ಲಾ ಕ್ಷೇತ್ರಗಳನ್ನು ಇಂದು ಈ ಶಕ್ತಿಗಳು ಅತಿಕ್ರಮಿಸಿಕೊಂಡಿದ್ದಾರೆ. ಖಾಲಿಯಾದ ಜಾಗವನ್ನು ಮರು ಪಡೆಯುವುದೇ ಮಹಾಬಲೇಶ್ವರ ಭಟ್ ರವರಿಗೆ ಕೊಡುವ ನಿಜವಾದ ಗೌರವ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಗಳು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸಂದರ್ಭ ಮಹಾಬಲೇಶ್ವರ ಭಟ್ ನಿರ್ದೇಶಕರಾಗಿದ್ದರು. ನಮಗೆ ವಯಸ್ಸಿನ ಅಂತರ ತೀರಾ ವ್ಯತ್ಯಾಸ ಇದ್ದರೂ ಹಿರಿಯ ಕಿರಿಯ ಎಂಬ ಭೇದ ಭಾವ ಇಲ್ವದೇ ಅಪಾರ ಗೌರವ ನೀಡುತ್ತಿದ್ದರು. ಇದು ಅವರ ಕಮ್ಯೂನಿಸ್ಟ್ ಚಿಂತನೆ. ಮೇಲ್ವರ್ಗದ, ಶ್ರೀಮಂತ ಜಮೀನ್ದಾರಿ, ಕುಲೀನ ಮನೆತನದಲ್ಲಿ ಜನಿಸಿ, ಸಾಮಾಜಿಕ ನ್ಯಾಯವನ್ನು ದುರ್ಬಲ ಅತೀ ಹಿಂದುಳಿದ ವರ್ಗದ ದೀನದಲಿತರ ಪರವಾಗಿ ಕಾಳಜಿ ವಹಿಸಿ ಕೆಲಸ ಮಾಡುವ ಹೃದಯದ ಶ್ರೀಮಂತಿಕೆ ಮಹಾಬಲೇಶ್ವರ ಭಟ್ಟರದ್ದು. ಇಂತಹ ವ್ಯಕ್ತಿಗಳು ಅಪರೂಪ ಎಂದು ಹಾಡಿ ಹೊಗಳಿದರು. ಭಾರತ ಕಮ್ಯೂನಿಸ್ಟ್ ಪಕ್ಷದ ಗೇಣಿದಾರರ ಪರವಾದ ಹೋರಾಟ ಅವಿಸ್ಮರಣೀಯ. ಅದರಲ್ಲೂ ಬಂಟ್ವಾಳ ತಾಲೂಕಿನಲ್ಲಿ ಐತಿಹಾಸಿಕ ಹೋರಾಟ ನಡೆದಿದೆ. ಅದರ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡವರು ಎಸ್.ಮಹಾಬಲೇಶ್ವರ ಭಟ್. ಆದರೆ ಇಂದು ಭೂ ಸುಧಾರಣೆ ಮುಖೇನ ಭೂಮಿ ಪಡೆದವರಿಗೆ ಅದು ಯಾರಿಂದ ಬಂದಿದೆ ಎಂದು ಗೊತ್ತಿರದಿದ್ದರೆ ವಿಪರ್ಯಾಸ ಎಂದರು.
ಇನ್ನೋರ್ವ ಅತಿಥಿ ಮಾಜೀ ಜಿಲ್ಲಾ ಪಂಚಾಯಿತ್ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ ಅತ್ಯಂತ ಸರಳ ಸಜ್ಜಾಗಿದೆ ಮಹಾಬಲೇಶ್ವರ ಭಟ್ ರವರಿಗೆ ನನ್ನ ತಂದೆ ಸಂಜೀವ ಗಟ್ಟಿಯವರು ನಿಕಟವರ್ತಿಯಾಗಿದ್ದರು. ಕೊಡುಗೈ ದುನಿಯಾದ ಮಹಾಬಲೇಶ್ವರ ಭಟ್ ಅವರ ಸವರ್ಕುಡೇಲು ಮನೆತನದ ಸುಮಾರು 5 ಎಕರೆ ಜಾಗವನ್ನು ಶಾಲೆಗಳ ದಾನವಾಗಿ ನೀಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಒಬ್ಬ ವ್ಯಕ್ತಿಯನ್ನು ನಾವು ನೂರ್ಕಾಲ ನೆನಪಿಸಿಕೊಳ್ಳುವುದೇ ಅವರ ವ್ಯಕ್ತಿತ್ವ ಎಂಬುದನ್ನು ಬಿಂಬಿಸುತ್ತದೆ ಎಂದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎನ್.ಪದ್ಮನಾಭ ರವರು ತನಗೆ ಮಹಾಬಲೇಶ್ವರ ಭಟ್ ಮಾಡಿದ ಸಹಾಯ ಹಾಗೂ ತನ್ನ ವ್ಯಕ್ತಿತ್ವ ಬೆಳೆಸಲು ಸಹಕರಿಸಿರುವುದನ್ನು ನೆನಪಿಸಿಕೊಂಡರು.
ಸಭೆಯನ್ನುದ್ಡೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಎಐಟಿಯುಸಿ ನಾಯಕರಾದ ವಿ.ಕುಕ್ಯಾನ್, ಮಹಾಬಲೇಶ್ವರ ಭಟ್ ರವರ ಸುಪುತ್ರ ಡಾ.ಉದಯ ಶಂಕರ್, ಸುಪುತ್ರಿ ಡಾ.ಮಾಧವಿ, ನರಿಂಗಾನ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಸಿಪಿಐ ನಾಯಕ ಅಮ್ಟಾಡಿ ಗ್ರಾಮ ಪಂಚಾಯಿತ್ ಸದಸ್ಯ ಬಿ.ಬಾಬು ಭಂಡಾರಿ ವಹಿಸಿದ್ದರು.
ಪ್ರಾರಂಭದಲ್ಲಿ ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ಸಹಕಾರ್ಯದರ್ಶಿ ಪ್ರೇಮನಾಥ ಕೆ. ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು