ಇತ್ತೀಚಿನ ಸುದ್ದಿ
ತಲಪಾಡಿ ಗಡಿಯಲ್ಲಿ ಇನ್ನಷ್ಟು ಕಟ್ಟುನಿಟ್ಟು: ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಇಂದಿನಿಂದ ಮಂಗಳೂರಿಗೆ ಪ್ರವೇಶ
03/08/2021, 08:31
ಮಂಗಳೂರು(reporterkarnataka.com): ನೆರೆಯ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ತಲಪಾಡಿ ಗಡಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಮತ್ತು ಕೇರಳ ಕಡೆಯಿಂದ ಬರುವ ಬಸ್ ಗಳು ಗಡಿಯಿಂದ 100 ಮೀಟರ್ ದೂರದಲ್ಲಿ ತಂಗಲಿದ್ದು, ಅಲ್ಲಿ 100 ಮೀಟರ್ ಕಾಲ್ನಡಿಗೆಯಲ್ಲಿ ತೆರಳಿಬೇಕಾಗಿದೆ.
ಮಂಗಳೂರು ಪ್ರವೇಶಿಸುವ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಾಗಿದೆ.
ಬಸ್ ಪ್ರಯಾಣಿಕರು ಮಾತ್ರವಲ್ಲದೇ ಇತರ ಯಾವುದೇ ವಾಹನದಲ್ಲಿ ತೆರಳುವವರು ಕಡ್ಡಾಯವಾಗಿ ಆರ್ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದಿದ್ದರೂ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.
ತಲಪಾಡಿ ಗಡಿಯಲ್ಲಿ ಇದುವರೆಗೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆಯ ವತಿಯಿಂದ ನಡೆಸಲಾಗುತ್ತಿದ್ದ ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ಕೇಂದ್ರವನ್ನು ಸೋಮವಾರ ತೆರವುಗೊಳಿಸಲಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿಯ ಮದ್ಯದಲ್ಲಿ ನಿರ್ಮಿಸಲಾಗಿದೆ.
ಇನ್ನು ಮಂಗಳೂರು ಕಡೆಯಿಂದ ತಲಪಾಡಿಗೆ ಬರುವ ಖಾಸಗಿ ಬಸ್‌ಗಳು ಟೋಲ್‌ಗೇಟ್ ವರೆಗೆ ಮಾತ್ರ ಬರಲು ಅವಕಾಶವಿದ್ದು, ಅಲ್ಲಿಂದ ಪ್ರಯಾಣಿಕರು ಇಳಿದು 100 ಮೀಟರ್ ದೂರ ಕಾಲ್ನಡಿಗೆಯಲ್ಲಿ ಮೇಲಿನ ಕೇರಳ ತಲಪಾಡಿಯ ಬಸ್ ತಂಗುದಾಣಕ್ಕೆ ನಡಕೊಂಡೆ ಬರಬೇಕಾಗಿದೆ. ಅಲ್ಲಿರುವ ಕಾಸರಗೋಡು ಕಡೆಗೆ ಬರುವ ಬಸ್ಸನ್ನು ಏರಬೇಕಾಗಿದೆ.