ಇತ್ತೀಚಿನ ಸುದ್ದಿ
ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿಗೆ ಪರಿಚಯಿಸಿದ್ದು ಶ್ಲಾಘನೀಯ: ಸಿಎಂ ಸಿದ್ದರಾಮಯ್ಯ
25/11/2023, 20:51
ಬೆಂಗಳೂರು(reporterkarnataka.com):ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ಮಂಗಳೂರು ಅಥವಾ ಉಡುಪಿ ಯಲ್ಲಿ ಮಾಡುವ ಬದಲು ಇಲ್ಲೇಕೆ ಮಾಡುತ್ತಿದ್ದೀರಿ ಎಂದು ಕಂಬಳದ ಸಂಘಟಕರಾದ ಅಶೋಕ್ ರೈ ಅವರಲ್ಲಿ ಕೇಳಿದೆ. ಅದಕ್ಕೆ ಅವರು ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ಕರಾವಳಿಗರಿದ್ದಾರೆ. ಹಾಗೆ ಬೆಂಗಳೂರಿಗರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಭಾರೀ ಸಂಖ್ಯೆಯಲ್ಲಿ ಕಂಬಳ ಪ್ರೇಮಿಗಳು ಆಗಮಿಸುತ್ತಾರೆ. ನೀವು ಕೂಡ ಬನ್ನಿ ಎಂದು ಆಹ್ವಾನಿಸಿದರು ಎಂದು ಸಿಎಂ ನುಡಿದರು.
ತುಳುವಿಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ಒತ್ತಾಯದ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು ಹಿಂದೆ ನಿಮ್ಮದೇ ಭಾಗದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ತುಳುವಿಗೆ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ಕೆಲಸ ಮಾಡಬಹುದಿತ್ತು. ಆದರೆ ಅವರು ಮಾಡಿಲ್ಲ. ನಾವು ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ನುಡಿದರು.