12:46 AM Tuesday30 - April 2024
ಬ್ರೇಕಿಂಗ್ ನ್ಯೂಸ್
ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ… ಸುಪ್ರೀಂ ಕೋರ್ಟ್ ಸೂಚಿಸಿದ ಬಳಿಕ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ… ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು

ಇತ್ತೀಚಿನ ಸುದ್ದಿ

ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳ ಜತೆ ಪೊಲೀಸ್ ಸಂಪರ್ಕ: ಪೊಲೀಸ್ ಮಹಾ ನಿರೀಕ್ಷಕರಿಂದ ಕಟ್ಟುನಿಟ್ಟಿನ ಆದೇಶ

02/08/2021, 22:07

ಸಾಂದರ್ಭಿಕ ಚಿತ್ರ
ಬೆಂಗಳೂರು(reporterkarnataka.com): ಪೊಲೀಸ್ ಮಹಾ ನಿರೀಕ್ಷಕರು ಬಹಳ ಪ್ರಮುಖವಾದ ಆದೇಶ ಹೊರಡಿಸಿದ್ದಾರೆ. ಅದು ಶಿಸ್ತು ಮತ್ತು ಶಿಷ್ಟಾಚಾರಕ್ಕೆ ಸಂಬಂಧಿಸಿದ್ದಾಗಿದೆ. ಅದೇನೆಂದರೆ ಪೊಲೀಸರು ಇನ್ನು ಮುಂದೆ ಠಾಣೆಯಲ್ಲಿ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ ಮುಂತಾದ ಖಾಸಗಿ ಆಚರಣೆಯನ್ನು ಅಪರಾಧಿ ಹಿನ್ನೆಲೆಯುಳ್ಳ ವ್ಯಕ್ತಿಗಳ ಜತೆ ಮಾಡಬಾರದು. ಕಡ್ಡಾಯವಾಗಿ ಶಿಸ್ತು ಹಾಗೂ ಶಿಷ್ಟಾಚಾರ ಕಾಯ್ದುಕೊಳ್ಳಬೇಕೆನ್ನುವುದು ಈ ಆದೇಶದ ಸಾರವಾಗಿದೆ.

ಪೊಲೀಸ್ ಮಹಾನಿರೀಕ್ಷಕರು ಹೊರಡಿಸಿರುವ ಆದೇಶದ ಪತ್ರದಲ್ಲಿ, ಅಪರಾಧಗಳ ತಡೆ, ಅಪರಾಧ ಪ್ರಕರಣಗಳ ತನಿಖೆ, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದೆ. ಸಮವಸ್ತ್ರದಲ್ಲಿನ ಪೊಲೀಸ್ ಅಧಿಕಾರಿಗಳ ವರ್ತನೆಯು ಇಡೀ ಪೊಲೀಸ್ ಸಮುದಾಯವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಸದಾ ಅರಿಯುವುದು ಸೂಕ್ತ ಎಂದು ಸೂಚ್ಯವಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಮೂಲಕ ಸಮಾಜಘಾತುಕ ಚಟುವಟಿಕೆಗಳನ್ನು ತಟಸ್ಥಗೊಳಿಸಿ ಸಮಾಜದಲ್ಲಿ ಶಾಂತಿ ಸ್ಥಾಪನೆ ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ತಮ್ಮ ಕಚೇರಿಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಅವಶ್ಯಕ ಎಂದು ಆದೇಶ ಪತ್ರವನ್ನು ಹೊರಡಿಸಿದ್ದಾರೆ. ಕಡ್ಡಾಯವಾಗಿ ಕೆಳಕಂಡ ಕ್ರಮವನ್ನು ಎಲ್ಲಾ ಪೋಲಿಸರು ಅನುಸರಿಸಬೇಕೆಂದ ಆದೇಶ ಪತ್ರದಲ್ಲಿ ತಿಳಿಸಿದೆ:

ಇನ್ನು ಠಾಣೆಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಆಚರಿಸುವಂತಿಲ್ಲ. ಸಾರ್ವಜನಿಕರ ಹೆಸರಿನಲ್ಲಿ ಅಪರಾಧ ಹಿನ್ನೆಲೆಯುಳ್ಳ ಸಮಾಜ ಘಾತುಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ. ಖಾಸಗಿ ಕಾರ್ಯಕ್ರಮಗಳಲ್ಲಿ ಸಮವಸ್ತ್ರ ಧರಿಸಿ ಭಾಗವಹಿಸುವುದಾಗಲಿ, ಸಮಾಜಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಅಥವಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಖಾಸಗಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮುನ್ನ ಸಂಘಟನೆ, ಸಂಸ್ಥೆಯ ವಿವರವನ್ನು ಸರಿಯಾಗಿ ತಿಳಿದು ಪಾಲ್ಗೊಳ್ಳಬೇಕು. ಇಲಾಖೆಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳು ಸಾರ್ವಜನಿಕರ ಅರಿವು ಮತ್ತು ಸಾರ್ವಜನಿಕ ಮತ್ತು ಪೊಲೀಸರ ಸಂಬಂಧ ವೃದ್ಧಿಸುವ ಉದ್ದೇಶವಾಗಿರಬೇಕು, ಆಗಮಿಸುವ ಮತ್ತು ನಿರ್ಗಮಿಸುವ ಪೊಲೀಸರಿಗೆ ಸ್ವಾಗತ, ಬೀಳ್ಕೊಡುಗೆ ಆಚರಣೆಯಿಂದ ದೂರವಿರುವುದು ಎಂಬ ಕ್ರಮಗಳನ್ನು ಪೊಲೀಸ್ ಮಹಾನಿರೀಕ್ಷಕ ಕಚೇರಿ ಆದೇಶಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು