ಇತ್ತೀಚಿನ ಸುದ್ದಿ
ಕೂಳೂರು: ಕೋಟೆದ ಬಬ್ಬುಸ್ವಾಮಿ ಸನ್ನಿಧಿಯಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ದೈವಸ್ಥಾನದ ಕೊಡಿ ಅಡಿಯ ಉದ್ಘಾಟನೆ
19/11/2023, 22:32

ಸುರತ್ಕಲ್ (reporterkarnataka.com): ಕೂಳೂರಿನ ಮೇಲ್ ಕೊಪ್ಪಳ್ ಮನ್ಸಪುನ್ನೋಡಿಯ ಶ್ರೀ ಕೋಟೆದ ಬಬ್ಬುಸ್ವಾಮಿ ಮತ್ತು ಸಪರಿವಾರ ದೈವಗಳ ದೈವಸ್ಥಾನ ಹಾಗೂ ಶ್ರೀ ನಾಗದೇವರ ಸನ್ನಿಧಿಯಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ದೈವಸ್ಥಾನದ ಕೊಡಿ ಅಡಿಯ ಉದ್ಘಾಟನೆ ಭಾನುವಾರ ನಡೆಯಿತು.
ನೂತನವಾಗಿ ನಿರ್ಮಾಣವಾದ ಕೊಡಿ ಅಡಿಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ವೈಯಕ್ತಿಕವಾಗಿ ಸಹಕರಿಸಿದ್ದು, ಶಾಸಕರನ್ನು ಗ್ರಾಮಸ್ಥರು ಈ ಸಂದರ್ಭ ಸನ್ಮಾನಿಸಿದರು.