1:59 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

ಬಹು ನಿರೀಕ್ಷಿತ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನವೆಂಬರ್ 24ರಂದು ತೆರೆಗೆ: ಟ್ರೇಲರ್ ನೋಡಿಯೇ ಅಭಿಮಾನಿಗಳು ಖುಷ್ ಖುಷ್

19/11/2023, 11:02

ಮೈಥಿಲಿ ಮಾಗಡಿ ಬೆಂಗಳೂರು

info.reporterkarnataka@gmail.com

‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ಅವರು ತಮ್ಮ ಆಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ನಿರ್ಮಾಣ ಮಾಡಿದ ರಾಜ್‍ ಬಿ. ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.


ಚಿತ್ರದ ಟ್ರೇಲರ್ ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟ್ರೇಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಲೈಟರ್ ಬುದ್ಧ ಫಿಲಂಸ್‍ ಸಹಯೋಗದೊಂದಿಗೆ ನಿರ್ಮಾಣವಾಗಿರುವ “ಸ್ವಾತಿ ಮುತ್ತಿನ‌ ಮಳೆ ಹನಿಯೇ” ಚಿತ್ರ ನವೆಂಬರ್ 24ರಂದು ಕೆ.ಆರ್.ಜಿ. ಸ್ಟುಡಿಯೋಸ್‍ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ, ನಾನೊಬ್ಬ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿ. ನಾನು ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿದ್ದೇನೆ. ಸಾವಿನಂಚಿನಲ್ಲಿರುವ ರೋಗಿಗಳನ್ನು ಶುಶ್ರೂಷೆ ಮಾಡುವ ಕೇಂದ್ರಕ್ಕೆ ಭೇಟಿ ನೀಡಿದಾಗ ಈ ಕಥೆ ಮಾಡಬೇಕೆನಿಸಿತು. ಇನ್ನು ಸ್ವಾತಿ ಮಳೆಯ ನೀರು ಆರೋಗ್ಯಕರ ಎಂದು ಆಯುರ್ವೇದ ಹೇಳುತ್ತದೆ. ಈ ಮಳೆಯ ನೀರು ಕಪ್ಪೆಚಿಪ್ಪಿನ ಜೊತೆ ಸೇರಿ ಮುತ್ತಾಗುತ್ತದೆ. ಹಾಗಾಗಿ ನಮ್ಮ ಚಿತ್ರದ ಕಥೆಗೆ ಈ ಶೀರ್ಷಿಕೆ ಸರಿ ಹೊಂದುವುದರಿಂದ “ಸ್ವಾತಿ ಮುತ್ತಿನ ಮಳೆ ಹನಿಯೇ” ಎಂದು ಶೀರ್ಷಿಕೆ ಇಟ್ಟಿದ್ದೇವೆ. ಅನಿಕೇತ್ ನನ್ನ ಪಾತ್ರದ ಹೆಸರು. ಮಿಥುನ್ ಮುಕುಂದನ್ ಸುಮಧುರ ಸಂಗೀತದಲ್ಲಿ ಚಿತ್ರದ ಹಾಡುಗಳು ಇಂಪಾಗಿ ಮೂಡಿಬಂದಿದೆ. ಚಿತ್ರತಂಡದ ಸಹಕಾರದಿಂದ ಚಿತ್ರ ಕೂಡ ಚೆನ್ನಾಗಿ ಬಂದಿದೆ ಎಂದರು.
ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಪ್ರೇರಣ. ಹಾಸ್ ಪೈಸ್ ವೊಂದರಲ್ಲಿ ಕೌನ್ಸಿಲರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ. ಸಾವಿನಂಚಿನಲ್ಲಿರುವವರಿಗೆ ಸಾವಿನ ಬಗ್ಗೆ ಧೈರ್ಯ ತುಂಬುವ ಪಾತ್ರ ಎನ್ನಬಹುದು ಎಂದು ನಾಯಕಿ ಸಿರಿ ರವಿಕುಮಾರ್ ತಿಳಿಸಿದರು.
ಮಿಥುನ್‍ ಮುಕುಂದನ್‍ ಸಂಗೀತದ ಬಗ್ಗೆ ಮಾಹಿತಿ ‌ನೀಡಿದರು. ಗಾಯಕಿ ಮಾಧುರಿ ಶೇಷಾದ್ರಿ ಚಿತ್ರದ “ಮೆಲ್ಲಗೆ” ಹಾಡನ್ನು ಹಾಡಿದರು.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ನಟಿಸಿರುವ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮಾ ಮುಂತಾದವರು ತಮ್ಮ ಪಾತ್ರದ ಕುರಿತು‌ ಮಾತನಾಡಿದರು. ಪ್ರವೀಣ್‍ ಶ್ರೀಯಾನ್‍ ಈ ಚಿತ್ರದ ಛಾಯಾಗ್ರಹಣದ ಜೊತೆಗೆ, ರಾಜ್‍ ಜೊತೆಗೆ ಸೇರಿ ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು