ಇತ್ತೀಚಿನ ಸುದ್ದಿ
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೆಲಸದಿಂದ ನೇಜಾರು ಹತ್ಯಾಕಾಂಡ ಆರೋಪಿ ಪ್ರವೀಣ್ ಚೌಗಲೆ ವಜಾ: ಕೃತ್ಯಕ್ಕೆ ದುಃಖ ವ್ಯಕ್ತಪಡಿಸಿದ ಸಂಸ್ಥೆ
18/11/2023, 18:18
ಉಡುಪಿ(reporterkarnataka.com): ಇಲ್ಲಿಗೆ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿದ ನರ ಹಂತಕ ಪ್ರವೀಣ್ ಅರುಣ್ ಚೌಗಲೆಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ.
ಘಟನೆ ಗಮನಕ್ಕೆ ಬಂದ ತಕ್ಷಣದಿಂದಲೇ ಪ್ರವೀಣ್ ಚೌಗಲೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹತ್ಯೆಯ ಘಟನೆ ಸಂಸ್ಥೆಗೆ ತೀವ್ರ ದುಃಖ ವ್ಯಕ್ತಪಡಿಸಿದೆ. ಮೃತರ ಸಂಬಂಧಿಗಳಿಗೆ ನಾವು ಬೆಂಬಲ ನೀಡಿ, ತನಿಖೆಗೆ ಎಲ್ಲ ಸಹಕಾರ ನೀಡುತ್ತೇವೆ ಎಂದು ಸಂಸ್ಥೆ ತಿಳಿಸಿದೆ.
ಆರೋಪಿ ಪ್ರವೀಣ್ ಚೌಗಲೆ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ತನ್ನ ಸಹೋದ್ಯೋಗಿ ಅಯ್ನಾಜ್ ಹಾಗೂ ಆಕೆಯ ತಾಯಿ ಹಸೀನಾ, ತಂಗಿ ಮತ್ತು ತಮ್ಮಂದಿರಾದ ಅಫ್ನಾನ್ ಹಾಗೂ ಅಸೀಮ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ಚೌಗಲೆಯನ್ನು ನವೆಂಬರ್ 16ರಂದು ಪೊಲೀಸರು ಬಂಧಿಸಿದ್ದರು.