ಇತ್ತೀಚಿನ ಸುದ್ದಿ
ಪ್ರಸಿದ್ಧ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ನಿಧನ: ಹೃದಯಾಘಾತಕ್ಕೆ ಬಲಿಯಾದ ಜನಪ್ರಿಯ ವೈದ್ಯ
17/11/2023, 13:09

ಮಂಗಳೂರು(reporterkarnataka.com): ಮಂಗಳೂರಿನ ಪ್ರಸಿದ್ಧ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು(61) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.
ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೀಡಾಗಿದ್ದಾರೆ. ತಕ್ಷಣ ಅವರನ್ನು ಐಸಿಯುಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಡಾ. ಪ್ರಭು ಅವರು ನಿಧನರಾಗಿದ್ದಾರೆ. ಲಕ್ಷ್ಮಣ ಪ್ರಭು ಜನಮನ ಗೆದ್ದ ವೈದ್ಯರಾಗಿದ್ದರು.