9:25 PM Friday19 - September 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಇತ್ತೀಚಿನ ಸುದ್ದಿ

ಡಿ. 28: ಅಖಿಲ ಕರ್ನಾಟಕ ರಾಜ್ಯ ಕೇಸರಿ ಟ್ರಸ್ಟ್ ವತಿಯಿಂದ ಕುದ್ರೋಳಿ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಉಚಿತ ಸಾಮೂಹಿಕ ವಿವಾಹ

13/11/2023, 19:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporter Karnataka@gmail.com

ಅಖಿಲ ಕರ್ನಾಟಕ ರಾಜ್ಯ ಕೇಸರಿ ಟ್ರಸ್ಟ್ ವತಿಯಿಂದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಡಿ.28ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಹೇಳಿದರು.
ಅವರು ಕೊಟ್ಟಿಗೆಹಾರದ ನಿಸರ್ಗ ಗ್ರ್ಯಾಂಡ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಭಾಗದಲ್ಲಿ ಹಿಂದು ಬಡ ಕುಟುಂಬದ ವಧುವರರಿಗೆ ವಿವಾಹ ಮಾಡಲು ಟ್ರಸ್ಟ್ ಮುಂದೆ ಬಂದಿದ್ದು, 12 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನಡೆಸಲು ತೀರ್ಮಾನಿಸಿದ್ದೇವೆ. ಈಗಾಲೇ 5 ಜೋಡಿಗಳು ಸಾಮೂಹಿಕವಾಗಿ ವಿವಾಹವಾಗಲು ಮುಂದೆ ಬಂದಿವೆ. ಇನ್ನೂ 7 ಜೋಡಿಗಳ ಅವಶ್ಯಕತೆಯಿದೆ. ಅದಲ್ಲದೇ ಮೂರು ಆಸಕ್ತ ಬಡ ಕುಟುಂಬಗಳಿಗೆ ಮನೆ ಹಸ್ತಾಂತರ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ. ಸಂಘಟನೆ ವತಿಯಿಂದ ನೂತನ ವಧುವರರಿಗೆ ಒಂದು ಪವನ್ ಚಿನ್ನದ ಕರಿಮಣಿ ಮತ್ತು ಉಡುಪುಗಳನ್ನು ನೀಡಲಾಗುವುದು’ಎಂದರು. ಅಖಿಲ ಕರ್ನಾಟಕ ರಾಜ ಕೇಸರಿ ಸಂಸ್ಥೆಯ ಗೌರವ ಸಲಹೆಗಾರ ಪ್ರೇಮ್ ರಾಜ್ ರೋಷನ್ ಸಿಕ್ವೇರಾ ಮಾತನಾಡಿ ‘ ನಮ್ಮ ಟ್ರಸ್ಟ್ ನಿಂದ ಕೊರೋನಾ ಸಮಯದಲ್ಲಿ 85 ಶವ ಸಂಸ್ಕಾರ, ಒಂದೇ ದಿನದಲ್ಲಿ 500 ನೇತ್ರ ನೋಂದಾವಣೆ, ಸೂರು ಇಲ್ಲದವರಿಗೆ 34 ಮನೆಗಳಿಗೆ ಆಸರೆ ನೀಡಿದ್ದೇವೆ. ಅನಾರೋಗ್ಯ ಪೀಡಿತರಿಗೆ ಸಹಾಯಾಸ್ತ ಮಾಡಿದ್ದೇವೆ. ವಿವಿಧ ಕ್ಷೇತ್ರದಲ್ಲಿ ನಮ್ಮ ಸಂಸ್ಥೆಯಿಂದ ಸಾಮಾಜಿಕ ಸೇವೆ ನೀಡಿದ್ದೇವೆ’ ಎಂದರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂಜಯ್ ಗೌಡ ಮಾತನಾಡಿ ‘ಮಲೆನಾಡಿನ ಬಡ ಹಿಂದು ಯುವಕರಿಗೆ ನೆರವಾಗಲು ಈ ಸಂಸ್ಥೆ ಮುಂದೆ ಬಂದಿದೆ.ನಮ್ಮ ಮಲೆನಾಡಿನ ಯುವಕರು ಸಾಮೂಹಿಕವಾಗಿ ವಿವಾಹವಾಗಲು ಯೋಚಿಸಿದ್ದರೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9686714110/9901947498 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು
ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು