6:37 PM Friday4 - July 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ

ಪೆರಾಜೆ: ಸಾರ್ವಜನಿಕರಿಂದ ಸಂಭ್ರಮದ ದೀಪಾವಳಿ ಉತ್ಸವ; ಮುಸ್ಸಂಜೆಯ ಮಬ್ಬು ಕತ್ತಲಿನಲ್ಲಿ ಬೆಳಕಿನಾಟ

13/11/2023, 19:45

ಬಂಟ್ವಾಳ(reporterkarnataka.com): ಸೀತಾರಾಮ‌ ನಗರ ಅಶ್ವತ್ಥಡಿ ಮಿತ್ತಪೆರಾಜೆ ಅಂಗನವಾಡಿ ಕೇಂದ್ರದ ವಠಾರದಲ್ಲಿ ಶ್ರೀ ಗುಡ್ಡಚಾಮುಂಡೇಶ್ವರಿ ಸೇವಾ ಟ್ರಸ್ಟ್ ಸಹಕಾರದಲ್ಲಿ ವಿಶ್ವ ಹಿಂದೂ ಪರಿಷತ್ತು ಪುತ್ತೂರು ವತಿಯಿಂದ ಸಾರ್ವಜನಿಕ ದೀಪಾವಳಿ ಉತ್ಸವ ಸಂಪನ್ನಗೊಂಡಿತು.
ಮುಸ್ಸಂಜೆಯ ವೇಳೆ ಬೆಳಕಿನ ಮರದಲ್ಲಿ ಮಾತೆಯರು ಹಣತೆ ಹಚ್ಚಿ ತುಡರ್ ಪರ್ಬಕ್ಕೆ ಚಾಲನೆ ನೀಡಿದರು. ನೆರೆದಿರುವ ಸಾರ್ವಜನಿಕರು ನೂರಾರು ಸಾಲು ದೀಪಗಳನ್ನು ಹಚ್ಚಿ ಅಂಗಣದಲ್ಲಿ ಬೆಳಕು ಚೆಲ್ಲಿದರು.


ಮುಖ್ಯ‌ಅತಿಥಿಯಾಗಿ ಆಗಮಿಸಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ದೀಪಾವಳಿ ಹಬ್ಬದ ಸಂದೇಶ ನೀಡಿ ಮಾತನಾಡಿದರು.
ಕೃಷಿ ಸಂಸ್ಕೃತಿಯ ತುಳುನಾಡಿನಲ್ಲಿ ದೀಪಾವಳಿ ಹಬ್ಬ ವಿಶೇಷವಾಗಿದೆ. ಜನಪದೀಯವಾದ ತುಡರ್ ಪರ್ಬ ನಿನ್ನೆ ಇಂದು ನಾಳೆ‌ ಎಂಬ ಪರಿಕಲ್ಪನೆಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಆಚರಣೆಯ ಸಡಗರದೊಂದಿಗೆ ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಮಾಡಿ ಉತ್ತಮ ಸಂಸ್ಕಾರ ನೀಡುವುದು ಹಿರಿಯರ ಜವಾಬ್ದಾರಿಯಾಗಿದೆ ಎಂದು ಹಬ್ಬದ ಶುಭಾಶಯ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಸೇವಾ ಪ್ರಮುಖ್ ಪಿ.ಸೀತಾರಾಮ ಭಟ್‌ ವಾಮನ ಅವತಾರದ ಕತೆಯನ್ನು ಹೇಳಿ ಸಮಾಜದಲ್ಲಿಅನ್ಯಾಯ ಮಿತಿಮೀರಿದಾಗ ಸತ್ಯನಾರಾಯಣ‌ನ ಅವತಾರವಾಗುತ್ತದೆ. ಸಜ್ಜನ ಶಕ್ತಿ ರಾಷ್ಟ್ರ ಶಕ್ತಿಯಾಗಿ ದುಷ್ಟಶಕ್ತಿಗಳು ನಾಶವಾಗಬೇಕು ಎಂದರು.
ಹಿರಿಯ ಶಿಕ್ಷಕ ಜಯಾನಂದ ಪೆರಾಜೆ ಅಮ್ಮುಂಜೆಗುತ್ತು, ಪೊಳಲಿ ಸೀನಪ್ಪ ಹೆಗ್ಗಡೆಯವರ ತುಲುವಾಲ ಬಲಿಯೇಂದ್ರ ಪುಸ್ತಕದ ಸಂದಿ ಪಾಡ್ದನವನ್ನು ವಾಚಿಸಿದರು.
ನಿವೃತ್ತ ಪೊಲೀಸ್ ‌ಅಧಿಕಾರಿ ಅಶ್ವತ್ಥಡಿ ಉಮೇಶ ಸಮೃದ್ಧಿ,ಕೃಷಿಕ ನಾರಾಯಣ ಎಂ.ಪಿ.,ಉಪನ್ಯಾಸಕ ಅನಿಲ್ ಕುಮಾರ್,ಸಾಮಾಜಿಕ ಕಾರ್ಯಕರ್ತ ಭುಜಂಗ,ಮಾತೆಯರಾದ ಗಾಯತ್ರಿ ಸೀತಾರಾಮ, ಭಾರತಿ ಪೆರಾಜೆ ಸಹಕರಿಸಿದರು.ಮಕ್ಕಳು ಸಿಡುಮದ್ದು ಸಿಡಿಸಿ ಸಂಭ್ರಮಿದರು.

ಇತ್ತೀಚಿನ ಸುದ್ದಿ

ಜಾಹೀರಾತು