ಇತ್ತೀಚಿನ ಸುದ್ದಿ
ಡಾ ಸುರೇಶ ನೆಗಳಗುಳಿ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: 19ರಂದು ಪ್ರದಾನ
10/11/2023, 10:03

ಮಂಗಳೂರು(reporterkarnataka.com): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಶಿವಮೊಗ್ಗ ಕೊಡಮಾಡುವ 2023ನೇ ಸಾಲಿನ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ನವೆಂಬರ್ 19ರಂದು ಕರ್ನಾಟಕ ಸಂಘದ ಸಭಾ ಭವನದಲ್ಲಿ ನಡೆಯುವ ಕರುನಾಡು ಸಾಮರಸ್ಯ ಕಾವ್ಯ ಸಮ್ಮಿಲನ ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ವೇದಿಕೆಯ ಸಂಸ್ಥಾಪಕಾಧ್ಯಕ್ಚ ಕೊಟ್ರೇಶ್ ಉಪ್ಪಾರ್ ಮತ್ತು ಜಿಲ್ಲಾಧ್ಯಕ್ಷೆ ಡಾ ಹಸೀನಾ ಎಚ್ ಕೆ ಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.