11:33 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಯಾವ ಅ್ಯಂಗಲ್ ನಲ್ಲಿ ನೋಡಿದ್ರೂ ಇದು ಜನ ಓಡಾಟದ ರಸ್ತೆ ಹಾಗೆ ಕಾಣಿಸುತ್ತದೆಯೇ?: ಕಾರ್ಪೊರೇಟರ್ ಸಾಹೇಬ್ರೇ ಎಲ್ಲಿದ್ದೀರಿ? 

01/08/2021, 19:43

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಇದೊಂದು ರಸ್ತೆ ಅಂತ ಯಾವ ಆ್ಯಂಗಲ್ ನಲ್ಲಿ ನೋಡಿದ್ರೂ ಗೊತ್ತಾಗುವುದಿಲ್ಲ. ಆದರೆ ಇದು ರಸ್ತೆಯೇ ಹೌದು. ದಿನಕ್ಕೆ ಸಾವಿರಾರು ಮಂದಿ ಈ ದಾರಿಯಾಗಿ ತಮ್ಮ ದೈನಂದಿನ ಕೆಲಸಕ್ಕಾಗಿ ತೆರಳುತ್ತಾರೆ. ದ್ವಿಚಕ್ರ ವಾಹನಗಳ ಸವಾರರು ಕೂಡ ಕುಸ್ತಿ ಮಾಡಿ ಸಂಚಾರ ನಡೆಸುತ್ತಾರೆ.


ಹಾಗೆಂತ ಇದೇನು ಪಶ್ಚಿಮಘಟ್ಟ ತಪ್ಪಲಿನ ಯಾವುದೇ ಬುಡಗಟ್ಟು ಜನಾಂಗದ ಕಾಲೋನಿ ಸೇರುವ ರಸ್ತೆಯಲ್ಲ. ಬದಲಿಗೆ ಮರೋಳಿಯ ಇತಿಹಾಸ ಪ್ರಸಿದ್ಧ ಸೂರ್ಯನಾರಾಯಣ ದೇವಾಲಯವನ್ನು ಸಂಪರ್ಕಿಸುವ ಒಂದು ಶಾರ್ಟ್ ಕಟ್ ರಸ್ತೆ.

ಪಾಳು ಬಿದ್ದ ಊರಿಗೆ ಹೋಗುವ ಮಾರ್ಗ ತರಹ ಇರುವ ಈ ರಸ್ತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಮರೋಳಿ ವಾರ್ಡ್ ಗೆ ಬರುತ್ತದೆ.

ಮಂಗಳೂರಿನ ಶಕ್ತಿಕೇಂದ್ರ ಎಂದು ಪರಿಗಣಿಸಲಾದ ಪಾಲಿಕೆಯಲ್ಲಿ
ಈ ರಸ್ತೆಯ ಜವಾಬ್ದಾರಿ ಹೊರುವ ಕಾರ್ಪೊರೇಟರೊಬ್ಬರಿದ್ದಾರೆ. ಆದರೆ ಅವರ ಮುಖನ್ನು ಸರಿಯಾಗಿ ನೋಡಿದ ನೆನಪು ಇಲ್ಲಿನ ನಿವಾಸಿಗಳಿಗಿಲ್ಲ. ಚುನಾವಣೆಯಲ್ಲಿ ಗೆದ್ದ ವೇಳೆ ಮಾಧ್ಯಮಗಳಲ್ಲಿ ಬಂದ ಫೋಟೋ ನೋಡಿದ ನೆನಪು ಮಾತ್ರ.
ಮರೋಳಿ ಸೂರ್ಯನಾರಾಯಣ ಸನ್ನಿಧಿಗೆ ದಿನ ನಿತ್ಯ ನೂರಾರು ಜನರು ಬರುತ್ತಾರೆ. ದೇಗುಲವನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ಅಲ್ಲದೆ ನಂತೂರು ಹೈವೇ ಯಿಂದ ಮರೋಳಿ ಅಮೃತ ನಗರವಾಗಿ ಮರೋಳಿ ದೇವಸ್ಥಾನಕ್ಕೆ ತೆರಳಲು  ಬಲು ಸಮೀಪದ ದಾರಿಯೂ ಇದಾಗಿದೆ. ನಾಗುರಿಯ ಮೂಲಕವೂ ತೆರಳಲು ಆಗುತ್ತದೆ. ಆದರೆ ಸುಮಾರು 200 ಮೀಟರ್ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. 200 ಮೀಟರ್ ರಸ್ತೆ ಕಾಂಗ್ರೆಟೀಕರಣ.ಈ ಪರಿಸರದಲ್ಲಿ ಸುಮಾರು 50 ಕ್ಕಿಂತಲೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲ ಕಾರ್ಪೋರೇಷನ್ ಗೆ ತೆರಿಗೆ ಕಟ್ಟುತ್ತಾರೆ. 

ಇಲ್ಲಿ ರಾತ್ರಿಯಾದ ಬಳಿಕ ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ಹೋಗುವುದು ಅಪಾಯಕಾರಿಯಾಗಿದೆ. ರಸ್ತೆ ಎಂದು ಕರೆಯಲ್ಪಡುವ ದಾರಿಯ ಅಕ್ಕಪಕ್ಕ ಗಿಡಗಂಟಿಗಳು ಬೆಳೆದು ನಿಂತಿವೆ. ಚಿರತೆ ಅಡಗಿ ಕುಳಿತಿದ್ದರೆ ಮೈಗೆ ಹಾರುವ ವರೆಗೆ ಗೊತ್ತಾಗುವ ಛಾನ್ಸೇ ಇಲ್ಲ. ಮುಂಚೆ ಈ ರಸ್ತೆಯಲ್ಲಿ ಕಾರು, ಬೈಕ್, ಸ್ಕೂಟರ್, ಟೆಂಪೊ ಸರಾಗವಾಗಿ ಹೋಗುತ್ತಿತ್ತು. ಆದರೆ ಈಗ ರಸ್ತೆ ಸಂಪೂರ್ಣ ಜರ್ಜರಿತವಾಗಿ


ಹೊಂಡಡಗುಂಡಿಗಳಿಂದ ಕೂಡಿದೆ. ಹಾಕಿದ ಡಾಮರು ಕಿತ್ತುಹೋಗಿ ಎಷ್ಟೋ ವರ್ಷಗಳು ಕಳೆದಿರುವ ಕಥೆಯನ್ನು ಅಲಲ್ಲಿ ಎದ್ದು ಕಾಣುವ ಜಲ್ಲಿಕಲ್ಲು ಹೇಳುತ್ತಿದೆ. ಒಟ್ಟಿನಲ್ಲಿ ಜನರು ಸಂಕಟ ಅನುಭವಿಸುತ್ತಿದ್ದಾರೆ. ಕಾರ್ಪೊರೇಟರ್ ಅವರೇ ಎಲ್ಲಿ ಅಡಗಿದ್ದರೂ ಒಮ್ಮೆ ಮುಖ ತೋರಿಸಿ ನಿಮ್ಮ ವಾರ್ಡ್ ನ ಜನರನ್ನು ಪಾವನ ಮಾಡಿ.

ಇತ್ತೀಚಿನ ಸುದ್ದಿ

ಜಾಹೀರಾತು