ಇತ್ತೀಚಿನ ಸುದ್ದಿ
ಮೂಲ ಸೌಕರ್ಯ ಒದಗಿಸದ ಜನಪ್ರತಿನಿಧಿಗಳು, ಅಧಿಕಾರಿಗಳು!: ಕರ್ಕೇಶ್ವರ-ಗಬ್ಬೂರು ರಸ್ತೆ, ಮಲೆನಾಡಿಗರಿಂದಲೇ ದುರಸ್ತಿ!!
08/11/2023, 10:12

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ-ಗಬ್ಬೂರು ರಸ್ತೆಯನ್ನು ಸ್ಥಳೀಯರೇ ಸೇರಿ ದುರಸ್ತಿ ಮಾಡಿದ ಘಟನೆ ನಡೆದಿದೆ.
ತಮ್ಮ ಊರಿನ ರಸ್ತೆಯನ್ನ ತಾವೇ ಹಣ ಹಾಕಿ ಹಳ್ಖಿಗರು
ದುರಸ್ಥಿ ಮಾಡಿದ್ದಾರೆ. ಜನಪ್ರತಿನಿಧಿಗಳಿಗೆ ಹಾಗೂ
ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ನೋ ಯೂಸ್ ಎಂದು ಹೇಳುವ ಸ್ಥಳೀಯರು ತಾವೇ ಹಣ ಹಾಕಿ, ಮಣ್ಣು ತರಿಸಿಕೊಂಡು ರಸ್ತೆ ದುರಸ್ತಿ ಮಾಡಿದ್ದಾರೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಮಲೆನಾಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಕೆಲಸಕ್ಕೆ ಜೀವರಾಜ್ ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುತ್ತಿದ್ರಿ. ಈಗ ಯಾರು ನಿಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹಳ್ಳಿಗರು ಪ್ರಶ್ನೆ ಮಾಡಿದ್ದಾರೆ.
ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರಿಗೆ ಮಲೆನಾಡಿಗರ ಪ್ರಶ್ನೆ ಹಾಕಿದ್ದಾರೆ.