ಇತ್ತೀಚಿನ ಸುದ್ದಿ
ರಾಜ್ಯಮಟ್ಟದ ಅಂತರ್ ಪಾಲಿಟೆಕ್ನಿಕ್ ಕ್ರೀಡಾಕೂಟ: ಶೆಟಲ್ ಬ್ಯಾಡ್ಮಿಂಟನ್ ನಲ್ಲಿ ರಾಜೇಶ್ ಬಿ.ಆರ್. ಪ್ರಥಮ; ರಾಷ್ಟ್ರಮಟ್ಟಕ್ಕೆ ಆಯ್ಕೆ
06/11/2023, 11:34
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporter Karnataka@gmail.com
ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ೪೪ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ನಡೆದ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್‌ನ ರಾಜೇಶ್ ಬಿ. ಆರ್. ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸಿಪಿಸಿ ಪಾಲಿಟೆಕ್ನಿಕ್ ಮೈಸೂರು, ಇವರ ವತಿಯಿಂದ ನಡೆದ ೪೪ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್‌ನ ರಾಜೇಶ್ ಬಿ. ಆರ್. ಮತ್ತು ಉಡುಪಿಯ ದರ್ಶನ್ ಸಿ. ಅಂಬಲಪಾಡಿ ಭಾಗವಹಿಸಿದ್ದು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರ
ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಉಡುಪಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಉಮಾ ಬಿ. ಮತ್ತು ಕ್ರೀಡಾ ಯೋಜನಾಧಿಕಾರಿಳಾದ ಮಧು ಎಂಜಿ ಇದ್ದರು. ಮೂಡಿಗೆರೆ ತಾಲ್ಲೂಕಿನ ಭಾರತಿಬೈಲ್‌ನ ರಾಜೇಶ್ ಬಿ. ಆರ್., ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೊ ವ್ಯಾಸಂಗ ಮಾಡುತ್ತಿದ್ದಾರೆ. ರಾಜೇಶ್ ಬಿ.ಆರ್. ಭಾರತಿಬೈಲ್‌ನ ರಾಮಚಂದ್ರ ಮತ್ತು ಸರೋಜ ದಂಪತಿ ಪುತ್ರ.
ಇದೇ ಕ್ರೀಡಾಕೂಟದಲ್ಲಿ ಉಡುಪಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಾದ ಸಾಕ್ಷಿತ್ ದೇವಾಡಿಗ ಕಾಪು , ಸುಚಿತ್ ಕುಂದಾಪುರ, ಕಾರ್ತಿಕ್ ಶೆಟ್ಟಿಗಾರ್, ಸಂದೀಪ್ ಎಚ್ ಎಂ, ಶ್ರೀ ಜಿ ಆಚಾರ್ಯ ಕುಂದಾಪುರ, ಸನಾತ್ ಆಚಾರ್ಯ ಕಾಪು, ವಿನಯ್ ಕುಮಾರ್, ಆದಿತ್ಯ ಉಡುಪಿ ವಾಲಿಬಾಲ್ ಪಂದ್ಯದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.