ಇತ್ತೀಚಿನ ಸುದ್ದಿ
ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭಾ ಸಂಘಟನೆಯ ಘಟಕ ಉದ್ಘಾಟನೆ
05/11/2023, 20:06

ಮಂಗಳೂರು(reporterkarnataka.com): ಇಲ್ಲಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸೆಕ್ಯುಲರ್ ಫ್ರಾನ್ಸಿಸ್ಕನ್ ಸಭಾ ಸಂಘಟನೆಯ ಘಟಕ ಹೊಸತಾಗಿ ಆರಂಭವಾಗಿದೆ.
ಭಾನುವಾರ ಚರ್ಚ್ ನಲ್ಲಿ ಬಲಿ ಪೂಜೆಯ ಸಂದರ್ಭದಲ್ಲಿ 13 ಮಂದಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಇದರ ಉದ್ಘಾಟನೆ ನೆರವೇರಿತು.
ಬಲಿ ಪೂಜೆಯ ನೇತೃತ್ವವನ್ನು ಚರ್ಚಿನ ಪ್ರಧಾನ ಗುರು ಫಾ. ಆಲ್ಬನ್ ಡಿಸೋಜ ಅವರು ವಹಿಸಿ ದಿನದ ಮಹತ್ವವನ್ನು ವಿವರಿಸಿದರು. ಸಂಘದ ನಿರ್ದೇಶಕ ಫಾ. ಪ್ರಕಾಶ್ ಲೋಬೊ ಅವರು ಸಂಘಟನೆಯ ಧ್ಯೇಯ, ಸದಸ್ಯರ ನಡವಳಿಕೆ, ಸಮಾಜ ಸೇವೆ ಮತ್ತು ನಿರಂತರ ಪ್ರಾರ್ಥನೆಯ ಬಗ್ಗೆ ವಿವರಿಸಿದರು.
ಇನ್ನೋರ್ವ ಧರ್ಮಗುರು ಫಾ. ಡೆರಿಲ್ ಫೆರ್ನಾಂಡಿಸ್ ಬಲಿಪೂಜೆಯ ಸಹ ಭಾಗಿತ್ವ ವಹಿಸಿದ್ದರು.ಸಂಘದ ಅಧ್ಯಕ್ಷ ಶುಭಾರ್ಟ್ ಸ್ವಾಗತಿಸಿದರು.