ಇತ್ತೀಚಿನ ಸುದ್ದಿ
ಮಂಗಳೂರು: ರೇಖಾ ಸುದೇಶ್ ರಾವ್ ಅವರ ‘ಹೊಂಬೆಳಕು’ ಕವನ ಸಂಕಲನ ಲೋಕಾರ್ಪಣೆ
02/11/2023, 16:47

ಮಂಗಳೂರು(reporterkarnataka.com): ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕ ಸಾಹಿತ್ಯೋತ್ಸವ ಸಮಾರಂಭದಲ್ಲಿ ನಗರದ ಮಂಗಳಾದೇವಿ ನಿವಾಸಿ ರೇಖಾ ಸುದೇಶ ರಾವ್ ಅವರ ಹೊಂಬೆಳಕು ಕವನ ಸಂಕಲನವನ್ನು ಪುರಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಮೂಡುಬಿದಿರೆಯ ಶ್ರೀಪತಿ ಭಟ್ ಲೋಕಾರ್ಪಣೆ ಮಾಡಿದರು. ಮಂಗಳೂರಿನ ವೈದ್ಯ, ಬರಹಗಾರ ಡಾ ಸುರೇಶ ನೆಗಳಗುಳಿ ಅವರು ಅವರ ಕೃತಿ ವಿಮರ್ಶೆ ಮಾಡುತ್ತಾ ಅದರೊಳಗಿನ ರಚನೆಯೊಂದನ್ನು ವಾಚಿಸಿದರು.
ಮುಂಬಯಿಯ ಸರ್ವ ಅರಸ ಶಟ್ಟಿ, ವಾಮನ್ ರಾವ್ ಬೇಕಲ್, ಕೊಳ್ಚಪ್ಪೆ ಗೋವಿಂದ ಭಟ್,ರಾಧಾ ಕೃಷ್ಣ ಉಳಿಯತ್ತಡ್ಕ, ವೀಣಾ ಕಾರಂತ್ , ಜಯಾನಂದ ಪೆರಾಜೆ ಹಾಗೂ ಪಿ.ವಿ ಪ್ರದೀಪ್ ಕುಮಾರ್ ವೇದಿಕೆಯಲ್ಲಿದ್ದರು. ಬಳಿಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ರಶ್ಮಿ ಸನಿಲ್ ನಿರೂಪಣೆ ಗೈದ ಈ ಸಮಾರಂಭದಲ್ಲಿ ಹಾ.ಮ.ಸತೀಶ,ರತ್ನಾ ಭಟ್,ಕಲ್ಲಚ್ವು ಮಹೇಶ್ ನಾಯಕ್ , ಚುಸಾಪ ಅಧ್ಯಕ್ಷ ಜಿ.ಕೆ ಶಾಸ್ತ್ರಿ, ಸೌಮ್ಯಾ ಗೋಪಾಲ್, ನಾಡಿನ ಸಮಾಚಾರ ಪತ್ರಿಕೆಯ ಬಸವರಾಜ್ ಯಲ್ಲಪ್ಪಾ ಉಪ್ಪಾರಟ್ಟಿ, ರೇಮಂಡ್ ಡಿಕುನ್ಹ , ರಾಧಾಕೃಷ್ಣ ಉಳಿಯತ್ತಡ್ಕ ,ವಾಮನ ರಾವ್ ಬೇಕಲ್,ವೀಣಾ ಕಾರಂತ ಮುಂತಾದವರು ಉಪಸ್ಥಿತರಿದ್ದರು
ಇದೇ ಸಮಾರಂಭದಲ್ಲಿ 50 ಕವಿಗಳ ಕೃತಿಗಳು ಲೋಕಾರ್ಪಿತವಾದುದು ವಿಶೇಷವಾಗಿತ್ತು.