ಇತ್ತೀಚಿನ ಸುದ್ದಿ
ಎಷ್ಟೆಲ್ಲ ಸರಕಾರಗಳು ಬಂದು ಹೋದರೂ ಕಳಸದಲ್ಲಿ ಜೋಳಿಗೆ ಇಂದಿಗೂ ಜೀವಂತ!: ಆಸ್ಪತ್ರೆ ಸೇರಲು ಅನಾರೋಗ್ಯಪೀಡಿತರನ್ನು ಇಲ್ಲಿ ಹೊತ್ತೇ ಸಾಗಬೇಕು!!
01/11/2023, 20:50
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕರ್ನಾಟಕದ ಸುವರ್ಣ ಸಂಭ್ರಮ ಮಹೋತ್ಸವದ ವೇಳೆ ಮನಕಲಕುವ ಘಟನೆ ನಡೆದಿದೆ. ರಸ್ತೆ ಇಲ್ಲದೆ ರೋಗಿಯನ್ನು ಜೋಳಿಗೆಯಲ್ಲಿ ಹೊತ್ಕೊಂಡು ಹೋದ ಪ್ರಸಂಗ ಕಳಸ ತಾಲೂಕಿನ ಹಿನಾರಿ ಗ್ರಾಮದಲ್ಲಿ ನಡೆದಿದೆ.
ಜನರು ರಸ್ತೆ ಇಲ್ಲದೆ ಖಾಸಗಿ ಜಮೀನಿನಲ್ಲಿ ಓಡಾಡುತ್ತಾರೆ.
ಪಾರ್ಶ್ವವಾಯುಪೀಡಿತ ವೃದ್ದರೊಬ್ಬರನ್ನು ಜೋಳಿಗೆಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಲಾಯಿತು.
ಒಂದೂವರೆ ಕಿಮೀನಲ್ಲಿ ಕ್ರಮಿಸಬಹುದಾದ ಹಾದಿಯನ್ನು ರಸ್ತೆ ಇಲ್ಲದೆ 16 ಕಿ.ಮೀ. ಸುತ್ತಿಕೊಂಡು ಬರಬೇಕಾಯಿತು. ಇರೋ ರಸ್ತೆಗೆ ಆಟೋ ಕೇಳಿದರೆ 1500-2000 ಬಾಡಿಗೆ ಕೇಳುತ್ತಾರೆ.
ರಸ್ತೆಗಾಗಿ ಮನವಿ ಮಾಡಿದ್ರೆ 3 ವರ್ಷದಿಂದ ಹಣ ಬಂದಿದೆ, ರಸ್ತೆ ಮಾಡ್ತೀವಿ ಅಂತಿದ್ದಾರೆ. ಅದರೆ ರಸ್ತೆ ಮಾಡಲೇ ಇಲ್ಲ.