3:50 PM Wednesday12 - August 2026
ಬ್ರೇಕಿಂಗ್ ನ್ಯೂಸ್
Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;…

ಇತ್ತೀಚಿನ ಸುದ್ದಿ

ಮಂಗಳೂರಿನ ವೈದ್ಯ ಡಾ. ನೆಗಳಗುಳಿ ಅವರ ‘ಕಡಲ ಹೂವು’ ಗಜಲ್ ಸಂಕಲನ ಲೋಕಾರ್ಪಣೆ

01/11/2023, 11:08

ಮಂಗಳೂರು(reporterkarnataka.com):
ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ ಹದಿನಾರನೇ ವಾರ್ಷಿಕ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಮಂಗಳೂರಿನ ವೈದ್ಯ ಡಾ. ಸುರೇಶ ನೆಗಳಗುಳಿ ಇವರ ಮೂರನೇಯ ಗಜಲ್ ಸಂಕಲನ ಕಡಲ ಹೂವು ನಗರದ ಪುರ ಭವನದಲ್ಲಿ ಲೋಕಾರ್ಪಣೆ ಗೊಂಡಿತು.
ಪಾಣೆಮಂಗಳೂರಿನ ರೈತ ಸೇವಾ ಸಂಘದ ಮುಖ್ಯಸ್ಥ ಜಯಶಂಕರ ಬಾಸ್ರಿತ್ತಾಯ ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಷ ಪುನರೂರು, ಕಿನ್ಮಿಗೋಳಿ ಯುಗ ಪುರುಷದ
ಭುವನಾಭಿರಾಮ ಉಡುಪ, ಮೂಡಬಿದಿರೆಯ ಧನಲಕ್ಷ್ಮೀ ಗೇರು ಬೀಜ ಮಾಲಕ ಶ್ರೀಪತಿ ಭಟ್ ಮತ್ತು ಪಿ.ವಿ. ಕುಮಾರ್ , ಕೊಳ್ಚಪ್ಪೆ ಗೋವಿಂದ ಭಟ್, ಜಯಾನಂದ ಪೆರಾಜೆ ಭಾಗಿಯಾದರು.
ಕೃತಿಕಾರ ಡಾ ಸುರೇಶ ನೆಗಳಗುಳಿಯವರು ತನ್ನ ಈ ಸಂಕಲನದಲ್ಲಿ ಕನ್ನಡ, ತುಳು, ಹವ್ಯಕ, ಇಂಗ್ಲಿಷ್, ಹಿಂದಿ, ಮಲಯಾಳಂ ಭಾಷೆಗಳ ವಿವಿಧ ಮಾದರಿಯ ಗಜಲ್ ಇರುವ ಬಗ್ಗೆ ತಿಳಿಸುತ್ತಾ ಅದರಲ್ಲೊಂದು ಗಜಲನ್ನು ವಾಚಿಸಿದರು.
ಬಳಿಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು
ರಶ್ಮಿ ಸನಿಲ್ ನಿರೂಪಣೆ ಗೈದ ಈ ಸಮಾರಂಭದಲ್ಲಿ ಹಾ.ಮ.ಸತೀಶ, ರತ್ನಾ ಭಟ್, ಕಲ್ಲಚ್ವು ಮಹೇಶ್ ನಾಯಕ್ , ರೇಖಾ ಸುದೇಶ ರಾವ್, ಚುಸಾಪ ಅಧ್ಯಕ್ಷ ಜಿ.ಕೆ. ಶಾಸ್ತ್ರಿ, ಸೌಮ್ಯಾ ಗೋಪಾಲ್, ನಾಡಿನ ಸಮಾಚಾರ ಪತ್ರಿಕೆಯ ಬಸವರಾಜ್ ಯಲ್ಲಪ್ಪಾ ಉಪ್ಪಾರಟ್ಟಿ, ರೇಮಂಡ್ ಡಿಕುನ್ಹ , ರಾಧಾಕೃಷ್ಣ ಉಳಿಯತ್ತಡ್ಕ , ವಾಮನ ರಾವ್ ಬೇಕಲ್, ವೀಣಾ ಕಾರಂತ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಮಾರಂಭದಲ್ಲಿ ಐವತ್ತು ಕವಿಗಳ ಕೃತಿಗಳು ಲೋಕಾರ್ಪಿತವಾದುದು ವಿಶೇಷವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು