ಇತ್ತೀಚಿನ ಸುದ್ದಿ
ಬೆಂಗಳೂರು: ಭಾರೀ ಅಗ್ನಿ ದುರಂತ; 30ಕ್ಕೂ ಹೆಚ್ಚು ಬಸ್ಸುಗಳು ಸುಟ್ಟು ಕರಕಲು; ನಗರಕ್ಕೆ ಹಬ್ಬಿದ ದಟ್ಟ ಕಪ್ಪು ಹೊಗೆ
30/10/2023, 21:30

ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ಬೆಂಗಳೂರಿನ ವೀರಭದ್ರ ನಗರದಲ್ಲಿ ಇಂದು ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ 30ಕ್ಕೂ ಹೆಚ್ಚು ಬಸ್ ಗಳು ಸುಟ್ಟು ಕರಕಲಾಗಿವೆ.
ವೀರಭದ್ರ ನಗರದ ಎಸ್.ವಿ. ಕೋಚ್ ತಯಾರಿಕಾ ಘಟಕದಲ್ಲಿ ಇಂದು ಬೆಳಗ್ಗೆ ಸುಮಾರು 11 ಗಂಟೆಯ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಒಂದು ಬಸ್ಸಿಗೆ ತಗಲಿದ ಬೆಂಕಿ ನೋಡು ನೋಡುತ್ತಿದ್ದಂತೆ ಪಕ್ಕದಲ್ಲೇ ನಿಲ್ಲಿಸಿದ ಬಸ್ ಗಳಿಗೆ ಹಬ್ಬಿತು. ವೆಲ್ಡಿಂಗ್ ಮಾಡುವಾಗ ಹಾರಿದ ಕಿಡಿ ಬೆಂಕಿ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಆದರೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮುಗಿಲೆತ್ತರಕ್ಕೆ ದಟ್ಟವಾದ ಕರಿಹೊಗೆ ಹಬ್ಬಿಕೊಂಡಿದೆ