5:58 PM Sunday12 - July 2026
ಬ್ರೇಕಿಂಗ್ ನ್ಯೂಸ್
ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;… Kodagu | ಮಡಿಕೇರಿ ರಾಜಾಸೀಟ್ ನಾಳೆಯಿಂದ ಜುಲೈ 12ರವರೆಗೆ ಕ್ಲೋಸ್: ಜಿಲ್ಲಾಧಿಕಾರಿ ಆದೇಶ ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ

ಇತ್ತೀಚಿನ ಸುದ್ದಿ

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಗುಡುಗು ಸಹಿತ ಮಳೆ: ಮನೆಗೆ ಸಿಡಿಲು ಬಡಿದು ಹಾನಿ

29/10/2023, 23:33

ಕಾರ್ಕಳ(reporterkarnataka.com): ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಗುಡುಗು ಸಹಿತ  ಸಾಮಾನ್ಯ ಮಳೆಯಾಗಿದ್ದು, ಕಣಂಜಾರು ಗ್ರಾಮದ ಪೆಲತ್ತೂರು ಪಟ್ಲದ ಮನೆಯೊಂದಕ್ಕೆ ಸಿಡಿಲು ಬಡಿದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತು ಹಾನಿಯಾಗಿದೆ.
ಬಜಗೋಳಿ, ನಾರಾವಿ , ಮಾಳ ಚೌಕಿ ಕಡಾರಿ , ಕೆರುವಾಶೆ , ಶಿರ್ಲಾಲು , ಈದು, ಕಣಂಜಾರು , ಗಾಳಿ ಸಿಡಿಲಿನಿಂದ ಆವೃತವಾದ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ಮಳೆಯಿಂದ ಹಾನಿ ಸಂಭವಿದಿದೆ.


ಹೆಬ್ರಿ ತಾಲೂಕಿನಲ್ಲಿ ಮಳೆಯಾಗಿದ್ದು,ಭಾನುವಾರ ಕೆಲವೆಡೆ ತುಂತುರು ಮಳೆ ಸುರಿದಿದ್ದು, ವರಂಗ ಗ್ರಾಪಂ ವ್ಯಾಪ್ತಿಯ ಮುನಿಯಾಲು, ನಾಡ್ಪಾಲು, ಕಬ್ಬಿನಾಲೆ ಭಾಗಗಳಲ್ಲಿ ಮಳೆಯಾಗಿದೆ.  ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನಿಂದ ಕೂಡಿದ ವಾತಾವರಣದಿಂದ  ತಂಪಾಗಿಸಿದೆ.
ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಪೆಲತ್ತೂರು ಪಟ್ಲ ದೇವೇಂದ್ರ ನಾಯಕ್ ಎಂಬವರ ಮನೆಯ ಪಕ್ಕದಲ್ಲಿ ಸಿಡಿಲು ಬಡಿದಿದ್ದು, ಈ ಮೂಲಕ ಸಾವಿರಾರು ಮೌಲ್ಯದ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಕಾರ್ಕಳ ಹಾಗೂ ಹೆಬ್ರಿಯಲ್ಲಿ ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗಿದ್ದು ಜನಸಾಮಾನ್ಯರು ತೊಂದರೆಗೀಡಾದರು.

ಇತ್ತೀಚಿನ ಸುದ್ದಿ

ಜಾಹೀರಾತು