8:57 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಜ್ಯುವೆಲ್ಸ್ ಆಫ್‌ ಇಂಡಿಯಾ ಆಭರಣ ಮೇಳ: ಬಾಲಿವುಡ್‌ ನಟಿ ತಮ್ಮನ್ನಾ ಭಾಟಿಯಾ ಉದ್ಘಾಟನೆ

27/10/2023, 21:36

*ಜ್ಯುವೆಲ್ಸ್ ಆಫ್‌ ಇಂಡಿಯಾದಿಂದ ಅ 27 ರಿಂದ 30 ರ ವರೆಗೆ ನಾಲ್ಕು ದಿನಗಳ ಮೆಗಾ ಆಭರಣ ಮೇಳ ಆರಂಭ

*ಭಾರತದ ಅತಿ ದೊಡ್ಡ ಅಂದ–ಚಂದದ ಆಭರಣ ಮೇಳ - ನವರಾತ್ರಿ, ದೀಪಾವಳಿಗಾಗಿ ವಿಶೇಷ ವಿನ್ಯಾಸಗಳ ಪ್ರದರ್ಶನ ಮತ್ತು ಮಾರಾಟ

ಬೆಂಗಳೂರು(reporterkarnataka.com): ಜ್ಯುವೆಲ್ಸ್ ಆಫ್‌ ಇಂಡಿಯಾದಿಂದ ಅಕ್ಟೋಬರ್‌ 27 ರಿಂದ 30ರ ವರೆಗೆ ಭಾರತದ ಅತಿ ದೊಡ್ಡ ಅಂದ – ಚಂದದ “ಜ್ಯುವೆಲ್ಸ್ ಆಫ್‌ ಇಂಡಿಯಾ – 2023 ಆಭರಣ ಮೇಳ ಆರಂಭವಾಗಿದ್ದು, ಆಭರಣ ಪ್ರಿಯರ ಕಣ್ಮನ ಸೆಳೆಯುತ್ತಿದೆ.
ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಆಭರಣ ಮೇಳದ ರಾಯಭಾರಿ ಬಾಲಿವುಡ್‌ ನಟಿ ತಮ್ಮನ್ನಾ ಭಾಟಿಯಾ ಆಭರಣ ಮೇಳ ಉದ್ಘಾಟಿಸಿದರು. ಆಯೋಜಕರಾದ ವಿಕ್ರಮ್ ಮೆಹ್ತಾ, ವಿಧಾನ ಪರಿಷತ್ ಶಾಸಕರು ಡಾ.ಟಿ.ಎ.ಶರವಣ, ಮತ್ತಿತರರು ಉಪಸ್ಥಿತರಿದ್ದರು.
ದೇಶಾದ್ಯಂತದ 100 ಹೆಚ್ಚಿನ ಮಳಿಗೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಇದು ಜ್ಯುವೆಲ್ಸ್ ಆಫ್ ಇಂಡಿಯಾದ 25ನೇ ಬೆಳ್ಳಿ ಮಹೋತ್ಸವವಾಗಿದೆ. ಈ ಬಾರಿ ತಮ್ಮನ್ನಾ ಭಾಟಿಯಾ ಟ್ರೆಂಡಿ ಆಭರಣಗಳನ್ನು ಧರಿಸಿ ಸಂಭ್ರಮಿಸಿದರು.
ವೈವಿಧ್ಯಮಯ ವಿನ್ಯಾಸ, ಆಕರ್ಷಕ ಕುಸುರಿ, ಯುವ ಸಮೂಹವನ್ನು ಸೆಳೆಯುವ ನವನವೀನ, ಮನಮೋಹಕ ಬ್ರ್ಯಾಂಡ್‌ ಆಭರಣಗಳನ್ನು ಈ ಬಾರಿ ಪ್ರದರ್ಶಿಸುತ್ತಿದ್ದು, ಆಭರಣ ಪ್ರಿಯರು, ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಮೇಳ ಸೆಳೆಯುತ್ತಿದೆ. ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳಿಗೆ ಆಭರಣ ಮೇಳ ಮೆರಗು ತರಲಿದ್ದು ಆಭರಣ ಖರೀದಿದಾರರಿಗೆ ಸಂಭ್ರಮ ಹೆಚ್ಚಿಸಿದೆ.
ಹಬ್ಬಗಳಿಗೆ ಚೆಂದದ ಆಭರಣಗಳನ್ನು ಖರೀದಿಸಲು ಬಯಸುವ ಮಹಿಳೆಯರಿಗೆ ಈ ಮೇಳದಲ್ಲಿ ಒಂದೇ ಸೂರಿನಡಿ ಸಹಸ್ರಾರು ವಿನ್ಯಾಸದ ಚಿನ್ನ ಮತ್ತು ವಜ್ರದ ಆಭರಣಗಳು ದೊರಕಲಿವೆ. ದೇಶದ ವಿವಿಧ ಭಾಗಗಳ ವರ್ಣರಂಜಿತ ಆಭರಣ ಇಲ್ಲಿ ಲಭ್ಯವಿದೆ. ಪ್ರತಿಯೊಬ್ಬರ ಮನಸೂರೆಗೊಳ್ಳುವ ಆಭರಣಗಳು ದೊರೆಯಲಿದೆ.
ಜೈಪುರದ ಕುಂದನ್ ಮತ್ತು ಮೀನಾಕ್ಷಿ ಆಭರಣಗಳು, ತಮಿಳುನಾಡಿನ ಪ್ರಾಚೀನ ವಿನ್ಯಾಸದ ಆಭರಣಗಳು, ರಾಜಾಸ್ಥಾನದ ವಿನೂತನ ಥೇವಾ ಮಾಧರಿಯ ಆಭರಣಗಳು, ಮುಂಬೈನ ಹೊಸ ವಿನ್ಯಾಸದ ಮತ್ತು ಬ್ರಾಂಡೆಡ್ ವಜ್ರಾಭರಣಗಳು, ಕೊಲ್ಕೊತ್ತಾದ ಕರಕುಶಲ ಮತ್ತು ಸೂಕ್ಷ್ಮ ವಿನ್ಯಾಸದ ಆಭರಣಗಳು, ರೂಬಿ ಹರಳುಗಳು, ಗುಜರಾತಿ ಶೈಲಿಯ ಚಿನ್ನಾಭರಣಗಳು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು, ಮದುಮಗಳ ಅಲಂಕಾರಿಕ ಆಭರಣಗಳು, ಅಪರೂಪದ ಬಳೆಗಳ ಸಂಗ್ರಹ, ಫ್ಯೂಷನ್ ಆಭರಣಗಳು, ಪುರುಷರ ಆಭರಣಗಳು, ವಿಧದ ಹರಳು ಕಲ್ಲುಗಳು ಪ್ರದರ್ಶನ ಮಳಿಗೆಗಳಲ್ಲಿ ಲಭ್ಯವಿದೆ.
ತಮ್ಮನ್ನಾ ಭಾಟಿಯಾ ಮಾತನಾಡಿ, ಬೆಂಗಳೂರು ನಗರ ಗಾರ್ಡನ್ ಸಿಟಿ ಜೊತೆಯಲ್ಲಿ ಗೋಲ್ಡನ್ ಸಿಟಿ ಎಂದು ಖ್ಯಾತಿ ಗಳಿಸಿದೆ. ಮಹಿಳೆಯರಿಗೆ ಚಿನ್ನಾಭರಣ ಎಂದರೆ ಎಲ್ಲಿಲ್ಲದ ಪ್ರೀತಿ, ಇಂತಹ ಮೇಳದಲ್ಲಿ ಗ್ರಾಹಕರು ತಮಗೆ ಇಷ್ಟವಾದ ಅಭರಣ ಖರೀದಿಸಿ, ಸಂತಸಪಡಬೇಕು ಎಂದು ಹೇಳಿದರು ಆಭರಣ ಪ್ರದರ್ಶನದ ಆಯೋಜಕರಾದ ವಿಕ್ರಮ್ ಮೆಹ್ತಾ ಮಾತನಾಡಿ, ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಮತ್ತು ನವೀನ ವಿನ್ಯಾಸದ ಆಭರಣಗಳ ಖರೀದಿಗೆ ಈ ಪ್ರದರ್ಶನ ವೇದಿಕೆಯಾಗಿದೆ. ಈ ಆಭರಣ ಪ್ರದರ್ಶನ ಎಲ್ಲರ ಅಭಿರುಚಿ, ಬಜೆಟ್‌ಗೆ ಅನುಗುಣವಾಗಿ ದೊರೆಯಲಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು