ಇತ್ತೀಚಿನ ಸುದ್ದಿ
ಅರಣ್ಯಾಧಿಕಾರಿಯನ್ನೂ ಬಿಡದ ಹುಲಿ ಉಗುರು: ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕಳಸ ಡಿಆರ್ ಎಫ್ ಓ ದರ್ಶನ್ ಅಮಾನತು
27/10/2023, 15:05
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹುಲಿ ಉಗುರು ಧರಿಸಿದ ಆರೋಪದ ಮೇಲೆ ತನಿಖೆಗೆ ಹಾಜರಾಗದ ಹಿನ್ನೆಲೆ ಕಳಸದ ಉಪ ವಲಯ ಅರಣ್ಯಾಧಿಕಾರಿ ಡಿ. ಆರ್.ಎಫ್. ಓ. ದರ್ಶನ್ ಅವರನ್ನು ಅಮಾನತು ಮಾಡಲಾಗಿದೆ.
ಹುಲಿ ಉಗುರು ಧರಿಸಿದ್ದಾರೆ ಸೂಕ್ತ ಕ್ರಮ ಕೈಗೊಳ್ಳಿ ಎಂದು
ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಅವರ ಮೇಲೂ ದೂರು ದಾಖಲಾಗಿತ್ತು. ವನ್ಯ ಜೀವಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿತ್ತು. ಕೊಪ್ಪ ಡಿ.ಎಫ್.ಓ. ನಂದೀಶ್ ಅಮಾನತು ಆದೇಶ ಹೊರಡಿಸಿದ್ದಾರೆ.
ಅರೆನೂರು ಗ್ರಾಮದ ಸುಪ್ರೀತ್ ಹಾಗೂ ಅಬ್ದುಲ್ ಎಂಬುವವರಿಂದ ದೂರು ದಾಖಲಾಗಿತ್ತು. ಆಲ್ದೂರು ವಲಯ ಅರಣ್ಯಾಧಿಕಾರಿಗೆ ಸುಪ್ರಿತ್ ಹಾಗೂ ಅಬ್ದುಲ್ ದೂರು ನೀಡಿದ್ದರು. ದರ್ಶನ್ ಅವರು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ಅಧಿಕಾರಿ. ತನಿಖೆ ನಡೆಸಿ ಕ್ರಮ ಕೈ ಗೊಳ್ಳುವಂತೆ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಅದಿಕಾರಿ
ಕ್ರಮ ಕೈಗೊಂಡಿದ್ದಾರೆ.