ಇತ್ತೀಚಿನ ಸುದ್ದಿ
ಸ್ಯಾಂಡಲ್ ವುಡ್ ಗೆ ಬೆಸೆದುಕೊಂಡ ಹುಲಿ ಉಗುರು ನಂಟು: ನಟ ದರ್ಶನ್, ಜಗ್ಗೇಶ್, ಮಾಜಿ ಸಚಿವ, ನಿರ್ಮಾಪಕ ಮುನಿರತ್ನಗೆ ಬಂಧನದ ಭೀತಿ
25/10/2023, 20:41

ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಕಾರಣಕ್ಕೆ ಈಗಾಗಲೇ ಜೈಲು ಸೇರಿದ್ದು, ಹುಲಿ ಉಗುರಿನ ನಂಟು ಇದೀಗ ಸ್ಯಾಂಡಲ್ ವುಡ್ ಗೆ ಬೆಸೆದುಕೊಂಡಿದೆ. ಚಾಲೆಂಜಿಗ್ ಸ್ಟಾರ್ ದರ್ಶನ್, ನವರಸ ನಾಯಕ ಜಗ್ಗೇಶ್ ಹಾಗೂ ಮಾಜಿ ಸಚಿವ ಹಾಗೂ ಚಲನಚಿತ್ರ ನಿರ್ಮಾಪಕ ಮುನಿರತ್ನ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಹುಲಿ ಉಗುರು ಧರಿಸಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ. ಸಂತೋಷ್ ಪ್ರಕರಣ ಹೊರ ಬರುತ್ತಿದ್ದಂತೆ
ಸ್ಯಾಂಡಲ್ ವುಡ್ ನಟರಾದ ದರ್ಶನ್ , ಜಗ್ಗೇಶ್ ಹಾಗೂ ನಿರ್ಮಾಪಕ ಮುನಿರತ್ನ ಅವರ ಬಂಧನಕ್ಕೆ ಒತ್ತಾಯ ಕೇಳಿ ಬರುತ್ತಿದೆ.
ಪ್ರಾಣಿಜನ್ಯ ಅಲಂಕಾರಿಕ ಆಭರಣವಾಗಿ ಧರಿಸಿದ ಕಾರಣಕ್ಕೆ ವರ್ತೂರು ಸಂತೋಷ್ ಕಂಬಿ ಎಣಿಸುತ್ತಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸ್ಯಾಂಡಲ್ ವುಡ್ ನಟರಾದ ದರ್ಶನ್ ತೂಗುದೀಪ, ಜಗ್ಗೇಶ್ ಹಾಗೂ ನಿರ್ಮಾಪಕ ಮುನಿರತ್ನ ಅವರ ಹುಲಿ ಉಗುರು ವಿಷಯ ಮುನ್ನಲೆಗೆ ಬಂದಿದೆ. ದರ್ಶನ್ ಹುಲಿ ಉಗುರು ಧರಿಸಿದ್ದ ಪೋಟೋಗಳು ಅದಾಗಲೇ ಸಾಕಷ್ಟು ವೈರಲ್ ಆಗಿದೆ. ಹೀಗಾಗಿ ನಟ ದರ್ಶನ್ ಬಂಧನವಾಗುತ್ತದಾ ಎಂಬ ಚರ್ಚೆ ಶುರುವಾಗಿದೆ. ಅವರು ಹುಲಿ ಉಗುರು ಧರಿಸಿದ ಪೋಟೋ ಇದೆ. ಅವರ ಮನೆಯನ್ನು ತಪಾಸಣೆ ಮಾಡಬೇಕು. ಅವರ ಮೇಲೂ ಕ್ರಮವಾಗಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಹಾಗೆ ಹಾಲಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಈ ಹಿಂದೆ ಮಾಧ್ಯಮ ವೊಂದಕ್ಕೆ ನೀಡಿದ ಸಂದರ್ಶನ ಈಗ ಚರ್ಚೆಗೆ ಗುರಿಯಾಗಿದೆ. ನಾನು ಹುಲಿಯಂತೆ ಬಾಳಬೇಕು ಎಂಬ ಕಾರಣಕ್ಕೆ ನನ್ನ ತಾಯಿ ನನಗೆ ಒರಿಜನಲ್ ಹುಲಿ ಉಗುರು ಕಟ್ಟಿಸಿ ಕೊಟ್ಟಿದ್ದರು. ಇದು ನನ್ನ ಕತ್ತಿನಲ್ಲಿರೋದು ಒರಿಜನಲ್ ಹುಲಿ ಉಗುರು ಎಂದು ಜಗ್ಗೇಶ್
ತೋರಿಸಿದ್ದರು. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. ಇಷ್ಟೇ ಅಲ್ಲದೆ ನಿರ್ಮಾಪಕ ಮುನಿರತ್ನ ಹುಲಿ ಉಗುರು ಧರಿಸಿದ ಪೋಟೋ ಕೂಡ ವೈರಲ್ ಆಗುತ್ತಿದೆ. ಕಾನೂನು ಎಲ್ಲರಿಗೂ ಒಂದೇ.
ಜಗ್ಗೇಶ್, ದರ್ಶನ್ ಹಾಗೂ ಮುನಿರತ್ನ ಅವರ ಮೇಲೂ ಕ್ರಮವಾಗಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.