ಇತ್ತೀಚಿನ ಸುದ್ದಿ
ಟ್ರಾಫಿಕ್ ಜಾಮ್ ತಡೆಗೆ ಬಸ್ ಚಲಿಸಲು ರಸ್ತೆಯಲ್ಲಿ ಯಲ್ಲೋ ಲೈನ್ ಅಳವಡಿಕೆ: ಡಿಸಿಪಿ ಸಲಹೆಗೆ ಮಂಗಳೂರು ಮೇಯರ್ ಅಸ್ತು
25/10/2023, 13:22
ಮಂಗಳೂರು(reporterkarnataka.com): ನಗರದಲ್ಲಿ ವಿಶೇಷವಾಗಿ ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆ ವರೆಗೆ ಟ್ರಾಫಿಕ್ ಜಾಮ್ ಆಗುವುದನ್ನು ತಡೆಯಲು ರಸ್ತೆಯಲ್ಲಿ ಬಸ್ ಚಲಿಸಲು ಯಲ್ಲೋ(ಹಳದಿ)ಲೈನ್ ಹಾಕಲು ಡಿಸಿಪಿ ದಿನೇಶ್ ಕುಮಾರ್ ಸಲಹೆ ಮಾಡಿದ್ದು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಒಪ್ಪಿಗೆ ಸೂಚಿಸಿದ್ದಾರೆ.
ಚತುಷ್ಪಥದಲ್ಲಿ ಬಸ್ ಗಳು ರಸ್ತೆಯಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಸ್ ಗಳ
ಎಂಟ್ರಿ ಮತ್ತು ಎಕ್ಸಿಟ್ ನಲ್ಲಿ ಹಂಪ್ಸ್ ಆಳವಡಿಸಬೇಕು. ಬಸ್ ಗಳು ಅತೀ ವೇಗವಾಗಿ ಬಸ್ ಸ್ಟಾಂಡಿನೊಳಗೆ ಚಲಿಸುವುದನ್ನು ಇದರಿಂದ ತಡೆಯಲು ಸಾಧ್ಯ ಎಂದು ಡಿಸಿಪಿ ಅಭಿಪ್ರಾಯಪಟ್ಟರು.
ಸರ್ವಿಸ್ ಬಸ್ ನಿಲ್ದಾಣ ಬಳಿಯ ಅನಧಿಕೃತ ಆಟೋರಿಕ್ಷಾ ಪಾರ್ಕಿಂಗ್ ಅನ್ನು ಡಿಸಿಪಿ ಪರಿಶೀಲನೆಗೆ ಸೂಚಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ಗಳಾದ ದಿವಾಕರ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ ಜತೆ ಸ್ಟೇಟ್ ಬ್ಯಾಂಕ್ ಬಳಿಯ ಸರ್ವಿಸ್ ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಕ್ಕೆ ಡಿಸಿಪಿ ಭೇಟಿ ನೀಡಿದರು.