ಇತ್ತೀಚಿನ ಸುದ್ದಿ
ಶೃಂಗೇರಿ ಸರಕಾರಿ ಆಸ್ಪತ್ರೆಯ ದುಷ್ಟ ಸಿಬ್ಬಂದಿಗಳು: ಬೆಂಚಿ ಮೇಲೆ ಮಲಗಿದ್ದರೂ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳೆಗೆ ಚಿಕಿತ್ಸೆ ನೀಡದ ವೈದ್ಯರು!!
23/10/2023, 11:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತೀವ್ರ ಜ್ವರ ಹಾಗೂ ವಾಂತಿಯಿಂದ ಅಸ್ವಸ್ಥವಾಗಿದ್ದ ಮಹಿಳೆಯೊಬ್ಬರಿಗೆ ಬೆಳಗ್ಗಿನಿಂದ ಸಂಜೆ ವರೆಗೂ ಯಾವುದೇ ಚಿಕಿತ್ಸೆ ನೀಡದೆ ವೈದ್ಯ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ ಘಟನೆ ಶೃಂಗೇರಿ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆ ಒಳಗಿನ ಬೆಂಚ್ ಮೇಲೆ ಮಲಗಿ ಕಮಲ ಎಂಬ ಮಹಿಳೆ ನರಳಾಡುತ್ತಿದ್ದರೂ ಆಸ್ಪತ್ರೆ ಸಿಬ್ಬಂದಿ ಕರುಣೆ ತೋರಿಸಿಲ್ಲ. ಮಹಿಳೆ ತೀವ್ರ ಅಸ್ವಸ್ಥ ರಾಗಿ ತೀವ್ರ ಜ್ವರ, ವಾಂತಿಯಿಂದ ನರಳುತ್ತಿದ್ರು ಆಸ್ಪತ್ರೆಗೆ ಸಿಬ್ಬಂದಿಗಳು ದಾಖಲಿಸಿಕೊಳ್ಳಲಿಲ್ಲ. ಬೆಳಗ್ಗೆಯಿಂದ ಆಸ್ಪತ್ರೆ ಆವರಣದ ಬೆಂಚ್ ಮೇಲೆ ರೋಗಿ ಮಲಗಿದ್ದರು. ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ರು ದಾಖಲು ಮಾಡಿಕೊಳ್ಳದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ.
ತೀವ್ರ ಅನಾರೋಗ್ಯವಿದ್ರು ಚಿಕಿತ್ಸೆ ನೀಡದ ಶೃಂಗೇರಿ ತಾಲೂಕು ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯಕ್ಕೊಳಗಾದ ಕಮಲ ಅವರು ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮದಿಂದ ಆಸ್ಪತ್ರೆಗೆ ಬಂದಿದ್ದರು. ಪತಿಯ ಜತೆ ಆಸ್ಪತ್ರೆಗೆ ಆಗಮಿಸಿದ್ದರು.
ಮಹಿಳೆಯ ಪರದಾಟ ನೋಡಿ ಆಸ್ಪತ್ರೆ ಸಿಬ್ಬಂದಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರು ಕ್ಲಾಸ್ ತೆಗದು ಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ಸಿಬ್ಬಂದಿಗಳು ದಾಖಲಿಸಿಕೊಂಡರು.