ಇತ್ತೀಚಿನ ಸುದ್ದಿ
ಅಧಿಕಾರದಲ್ಲಿದ್ದಾಗ ನೀರು ಹರಿಸದ ಮಾಜಿ ಶಾಸಕ ಶ್ರೀಮಂತ ಪಾಟೀಲರು ತಿಂಗಳಲ್ಲಿ ನೀರು ಬಿಡುತ್ತೇನೆ ಎನ್ನುತ್ತಿರುವುದು ಹಾಸ್ಯಾಸ್ಪದ: ಕಾಂಗ್ರೆಸ್ ಟೀಕೆ
21/10/2023, 15:07
ಶಿವರಾಯ ಲಕ್ಷಣ ಕರ್ಕರಮುಂಡಿ
info.reporterkarnataka@gmail.com
ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರು ಅಧಿಕಾರದಲ್ಲಿದ್ದಾಗ ಹೇಳಿಕೆ ಮಾತ್ರ ನೀಡಿದ್ದಾರೆಯೇ ಹೊರತು ಶ್ರೀ ಬಸವೇಶ್ವರ ಏತ ನೀರಾವರಿಯ ಕಾಲುವೆಯಲ್ಲಿ ನೀರು ಹರಿಸಿಲ್ಲ. ಈಗ ನನಗೆ ಅಧಿಕಾರ ಕೊಡಿ ಒಂದು ತಿಂಗಳಲ್ಲಿ ನೀರು ಹರಿಸುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಟೀಕಿಸಿದೆ
5 ವರ್ಷ ಬಿಜೆಪಿ ಸರಕಾರ ಇದ್ದು ಕಾಗವಾಡ ಮತ ಕ್ಷೇತ್ರದ ಶಾಸಕರಾಗಿ ಸಚಿವರಾಗಿ ಶ್ರೀಮಂತ ಪಾಟೀಲರ ಅಧಿಕಾರದಲ್ಲಿದ್ದರು ದಿನಕ್ಕೊಂದು ಹೇಳಿಕೆಯನ್ನು ಶ್ರೀ ಬಸವೇಶ್ವರ ಏತ ನೀರಾವರಿ ಬಗ್ಗೆ ನೀಡತಾ ಇದ್ದರು. ಅದೆಲ್ಲ ಕೇವಲ ಹೇಳಿಕೆಯಾಗಿ ಉಳಿದಿದೆ ಹೊರತು ನೀರು ಮಾತ್ರ ಕಾಲುವೆಗೆ ಬರಲಿಲ್ಲ. ಆದರೆ ರೈತರ ಕಣ್ಣಲ್ಲಿ ನೀರು ಬಂತು. ಈಗ ಒಂದು ತಿಂಗಳು ನನಗೆ ಅಧಿಕಾರಿ ಕೊಡಿ ನೀರು ಹರಿಸುತ್ತೇನೆ ಎನ್ನುವುದು ನಾಟಕೀಯ ಹಾಸ್ಯಾಸ್ಪದ ಮಾತು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ರೈತ ಜನರನ್ನು ಕೂಡಿಸಿಕೊಂಡು ಹೋರಾಟ ಸಮಯದಲ್ಲಿ ಹೇಳಿಕೆ ನೀಡಿದರೆ ರೈತರು ಯಾರು ಕಿವಿ ಕೊಡಲ್ಲ. ರೈತರು ಪ್ರಜ್ಞಾವಂತರಿದ್ದಾರೆ ಎಂದು ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ವಿನಾಯಕ ಬಾಗಡಿ ಹಾಗೂ ಪ್ರವೀಣ ನಾಯಿಕ ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶ್ರೀಮಂತ ಪಾಟೀಲರೆ ತಮಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಈ ವರ್ಷದ ಹಂಗಾಮಿನ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ ವೇಳೆ ಸರಿಯಾದ ತೂಕ ನೀಡಿ ಕಾಟ ಹೊಡೆಯದೆ ಸರಿಯಾಗಿ ಬಿಲ್ಲನ್ನು ನೀಡಿ ಸುಮ್ಮನೆ ರೈತರಿಗೆ ಸುಳ್ಳು ಹೇಳಿ ಮೋಸ ಮಾಡುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಗವಾಡ ಕ್ಷೇತ್ರದ ಶಾಸಕರಾದ ರಾಜು ಕಾಗೆ ಹಾಗೂ ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ ಇಬ್ಬರು ಕೊಡಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸುಭದ್ರವಾದ ರಾಜ್ಯ ಸರಕಾರದಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ಶ್ರೀ ಬಸವೇಶ್ವರ ಯಾತ ನೀರಾವರಿ ಮೂಲಕ ಶೀಘ್ರದಲ್ಲಿ ಕಾಲುವೆಗೆ ನೀರು ಹರಿಸುವ ಮೂಲಕ ಕಾಗವಾಡ ಮತ ಕ್ಷೇತ್ರದ ರೈತರ ಕನಸು ನನಸಾಗಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದರಾಯ ತೋಡಕರ, ಉಮೇಶ ಪಾಟೀಲ,ಅಸ್ಲಾಂ ಮುಲ್ಲಾ, ಸಂಜಯ ಅಡಾಟೆ, ನಾಯ್ಕಭಾ ಶಿಂದೆ, ಪರಗೊಂಡ ಮುದೋಳ, ವಿಠ್ಠಲ ಅವಳೆ, ಅಶೋಕ ಬಾಡಗಿ, ಅಪ್ಪು ಚೌಗಲಾ, ಅಶೋಕ ಪೂಜಾರಿ, ನಿಜಗುಣಿ ಮಗದುಮ್ಮ, ಮೋಹನ ಬಾಗಡಿ,ಶಿವಾನಂದ ಮಗದುಮ್ಮ, ಪ್ರವೀಣ ಭಂಡಾರೆ, ಹಣಮಂತ ಕಾಂಬಳೆ, ರಮೇಶ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.