ಇತ್ತೀಚಿನ ಸುದ್ದಿ
ಪರಶುರಾಮ ಮೂರ್ತಿ ವಿವಾದ; ಮುಂದಿನ ವಾರ ಸಿಎಂ ಭೇಟಿ ಮುನ್ನ ಸತ್ಯಾಸತ್ಯತೆ ವರದಿ ನೀಡಿ: ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೂಚನೆ
20/10/2023, 23:28

ಕಾರ್ಕಳ(reporterkarnataka.com): ಬೈಲೂರು ಥೀಮ್ ಪಾರ್ಕ್ ನ ಪರಶುರಾಮ ಮೂರ್ತಿ ಕುರಿತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಯವರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಲಿದ್ದು, ಅದಕ್ಕೆ ಮುನ್ನ ಸತ್ಯಾಸತ್ಯತೆ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಕಾರ್ಕಳದ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿ ವಿವಾದಿತ ಪರಶುರಾಮ ಮೂರ್ತಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಪರಶುರಾಮ ಥೀಮ್ ಪಾರ್ಕ್ ಪ್ರದೇಶವು ಗೊಮಾಳ ಜಾಗವಾಗಿದ್ದ ಕಾರಣ ಅಂದಿನ ಬಿಜೆಪಿ ಸರಕಾರವು ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿ ಯವರಿಗೆ ಪತ್ರಬರೆದಿತ್ತು. ಹೀಗಿದ್ದರು ಕೂಡ ಕಾಂಗ್ರೆಸ್ ಪಕ್ಷ ಮೇಲೆ ಬಿಜೆಪಿ ಗೂಬೆ ಕೂರಿಸುವ ಕೆಲಸ ಮಾಡಿದೆ ಎಂದು ಮಂಜುನಾಥ ಭಂಡಾರಿ ನುಡಿದರು.
ಈಗಾಗಲೇ ಸರಕಾರದಿಂದ 6.5 ಕೋಟಿ ರೂಪಾಯಿ ಹಣ ಸರಕಾರದಿಂದ ಬಿಡುಗಡೆ ಮಾಡಿದ್ದು ಉಳಿದ ಹಣವನ್ನು ಸರಕಾರದಿಂದ ಭರಿಸುವಂತೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಮನವಿ ಮಾಡಿದರು. ಅದರೆ ಅವರ ಮನವಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನಿರ್ಮಿತಿ ಕೇಂದ್ರದ ಅಧ್ಯಕ್ಷ ರಾಗಿರುವ ಜಿಲ್ಲಾಧಿಕಾರಿಯವರೆ ಕಾಮಗಾರಿ ನಿಲ್ಲಿಸಲು ಹೇಳಿದ್ದಾರೆ. ಥೀಮ್ ಪಾರ್ಕ್ ಗೆ ಬಿಟ್ಟು ಕೊಡಲಾಗಿದೆ ಎಂಬ ಪೂರಕ ದಾಖಲೆಗಳನ್ನು ಕೊಡಲಿ, ನಂತರ ಸರಕಾರದ ಕಡೆಯಿಂದ ಬೇಕಾದ ಅಗತ್ಯ ನೆರವು ನೀಡಲಾಗುವುದು. ಅದರೆ ಪೂರಕ ದಾಖಲೆಗಳನ್ನು ಸಲ್ಲಿಸಲಿ. ನಮ್ಮ ಸರಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.
ಪೈಬರ್ ತುಂಡುಗಳು ವೈರಲ್ : ಪರಶುರಾಮ ಥೀಮ್ ಪಾರ್ಕ್ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಣ್ಣದ ಪ್ಲಾಸ್ಟಿಕ್ ತೆರವು ಗೊಳಿಸಿದರು. ಪರಶುರಾಮ ಕಾಲಿನ ಭಾಗದ ಪಿಒಪಿ ತುಂಡುಗಳನ್ನು ತೆಗೆದು ಮಂಜುನಾಥ ಭಂಡಾರಿಯವರಿಗೆ ತೋರಿಸಿದರು.
ಫೈಬರ್ ಮೂರ್ತಿ ಬಗ್ಗೆ ಸ್ಪಷ್ಟೀಕರಣ ಬರೆದು ಕೊಡಿ ಎಂದು ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅದರೆ ಅದಕ್ಕೆ ವಿಚಲಿತಗೊಂಡ ಇಂಜಿನಿಯರ್ ಸಚಿನ್ ನಿರ್ಮಿತಿ ಕೆಂದ್ರದ ನಿರ್ದೇಶಕರನ್ನು ಕೇಳುವಂತೆ ಕೇಳಿಕೊಂಡರು. ಪರಶುರಾಮ ಥೀಮ್ ಪಾರ್ಕ್ ಹಾಗೂ ವಿವಾದಿತ ಮೂರ್ತಿ ನಿರ್ಮಾಣ ಹೊಣೆ ಹೊತ್ತಿರುವ ನಿರ್ಮಿತಿ ಕೆಂದ್ರದ ನಿರ್ದೇಶಕ ಗೈರು ಹಾಜರಾಗಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಪೋನ್ ಮಾಡಿ ಸ್ಪಷ್ಟನೆ ನೀಡುವಂತೆ ಹೇಳಿದರು. ಪರಶುರಾಮ ಮೂರ್ತಿ ಪೈಬರ್ ತುಂಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿವೆ.