ಇತ್ತೀಚಿನ ಸುದ್ದಿ
ಮಂಗಳೂರು ಮಹಾನಗರ ಪಾಲಿಕೆ ಸುರತ್ಕಲ್ ವಲಯ ಕಚೇರಿಯಲ್ಲಿ ಆಯುಧ ಪೂಜೆ: ವಲಯ ಆಯುಕ್ತೆ ವಾಣಿ ಆಳ್ವ ಉಪಸ್ಥಿತಿ
20/10/2023, 21:47
ಸುರತ್ಕಲ್(reporterkarnataka.com): ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ವಲಯ ಕಚೇರಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆಯು ವಲಯ ಆಯುಕ್ತರಾದ ವಾಣಿ ಆಳ್ವ ಅವರ ನೇತೃತ್ವದಲ್ಲಿ ನಡೆಯಿತು.







ಪ್ರತಿ ವರ್ಷದಂತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಧ್ಯುಕ್ತವಾಗಿ ಆಯುಧ ಪೂಜೆ ನೆರವೇರಿಸಲಾಯಿತು. ಪಾಲಿಕೆ ಸುರತ್ಕಲ್ ವಲಯ ಆಯುಕ್ತರಾದ ವಾಣಿ ಆಳ್ವ, ಕಂದಾಯ ಅಧಿಕಾರಿ ಮೂರ್ತಿ,ಸಹಾಯಕ ಕಂದಾಯಾಧಿಕಾರಿ ದೇವೇಂದ್ರಪ್ಪ ಪರಾರಿ, ಸುಪರಿಟೆಂಡೆಂಟ್ ಮೀರಾ, ಸಹಾಯಕ ನಗರ ಯೋಜನಾಧಿಕಾರಿ ಲಾವಣ್ಯ, ಇಂಜಿನಿಯರ್ ವಿನೋದ್ ಕುಮಾರ್, ಕಂದಾಯ ನಿರೀಕ್ಷಕ ಯಾದವ ಹೊಸಬೆಟ್ಟು, ಸಮುದಾಯ ಸಂಘಟಕರಾದ ಸೋನಿಯಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.














