ಇತ್ತೀಚಿನ ಸುದ್ದಿ
ರಾಜ್ಯ ಸರಕಾರ ಬೀಳಿಸೋ ತಾಕತ್ತು ಹೊರಗಡೆ ಯಾರಿಗೂ ಇಲ್ಲ; ಅವರಾಗಿಯೇ ಬೀಳಬೇಕು: ಬಿಜೆಪಿ ನಾಯಕ ಸಿ.ಟಿ. ರವಿ
20/10/2023, 13:14

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ರಾಜ್ಯದಲ್ಲಿ 135 ಮಂದಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರೆಲ್ಲ ಒಗ್ಗಟ್ಟಿದ್ರೆ ಯಾರಿಗೂ ಬೀಳಿಸಲು ಆಗುತ್ತಾ? ಸಚಿವ
ಸತೀಶ್ ಜಾರಕಿಹೊಳಿಗೆ ನಾವೇನಾದರು ಹೇಳಿಕೊಟ್ಟಿದ್ದೀವಾ….? ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು,
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಗೆ ಬಂದಾಗ ಹೋಗಬೇಡಿ ಅಂತ ನಾವು ಹೇಳಿಕೊಟ್ಟಿದ್ದೀವಾ…? ಅದು ಅವರು ತೆಗೆದುಕೊಂಡಿರುವ ತೀರ್ಮಾನ. 20 ಹಿರಿಯ ಶಾಸಕರು ಪತ್ರ ಬರೆದಿದ್ದರು, ನಾವೇನಾದ್ರು ಬರೀರಿ ಅಂತ ಬರ್ಸಿದ್ವಾ…? ಬಿಜೆಪಿಯವ್ರು ಬರ್ಸಿದ್ರೆ ಇವೆಲ್ಲಾ ಬಿಜೆಪಿಯವರು ಮಾಡ್ತಿದ್ದಾರೆ ಅನ್ನಬಹುದು ಎಂದು ರವಿ ನುಡಿದರು.
ರಾಜಣ್ಣ ಅವರ ಬಳಿ ಐವರು ಡಿಸಿಎಂ ಮಾಡಿ ಅಂತ ನಾವು ಹೇಳಿಸಿದಲ್ಲ. 135 ಜನ ಒಟ್ಟಿಗೆ ಇದ್ರೆ ಯಾರು ಅಲ್ಲಾಡಿಸಲು ಅಗುವುದಿಲ್ಲ.ಅವ್ರು ಅಲ್ಲಾಡ್ತಾ ಇದ್ರೆ ಅದು ನಮ್ಮ ಕೈಯಲ್ಲಿ ಇಲ್ಲ. ಅಲ್ಲಾಡ್ತಾ ಇದ್ರೆ ಇವತ್ತಲ್ಲ ನಾಳೆ ಬಿದ್ದೇ ಬಿಳುತ್ತೇ ನಮ್ಮ ಕೈಯಲ್ಲಿದ್ದೀಯಾ ಎಂದರು.
ಜನ ಒಳ್ಳೆಯ ಅಡಳಿತ ಕೊಡಿ ಅಂತ ಅಧಿಕಾರ ಕೊಟ್ಟಿದ್ದಾರೆ.
ಕಲಾವಿದರ ಬಳಿಯೂ ದುಡ್ಡು ಎತ್ಕೊಂಡು ತಿನ್ನಿ ಅಂತ ಅಧಿಕಾರ ಕೊಟ್ಟಿದ್ದಾರಾ?ಎಲ್ಲದರಲ್ಲೂ ಹೆದರಿಸಿ-ಬೆದರಿಸಿ ವಸೂಲಿ ಮಾಡಿ ಅಂತ ಅಧಿಕಾರ ಕೊಟ್ಟಿರೋದಾ?ನಾವು ಹೆಚ್ಚು ಅಂದ್ರೆ ಇವ್ರ ಮೇಲೆ ಆರೋಪ ಮಾಡಬಹುದು. ಸರ್ಕಾರದ ಬಗ್ಗೆ ಜನ ಶಾಪ ಹಾಕಬಹುದು, ಅದಕ್ಕಿಂತ ಇನ್ನೇನೂ ಮಾಡೋಕಾಗುತ್ತೇ ಎಂದು ಸಿ. ಟಿ. ರವಿ ಪ್ರಶ್ನಿಸಿದರು.
ಸರ್ಕಾರವನ್ನ ಬಿಳಿಸುವ ತಾಕತ್ತು ಹೊರಗಡೆಯ ಯಾರಿಗೂ ಇಲ್ಲ.
ಬೀಳಿಸುವ ಸಾಮಾರ್ಥ್ಯ ಇರೋದು ಒಳಗಡೆ ಇರುವ ಕಾಂಗ್ರೆಸ್ಸಿಗರಿಗೆ ಮಾತ್ರ ಎಂದರು.