ಇತ್ತೀಚಿನ ಸುದ್ದಿ
ಬೆಂಗಳೂರಿನ ಸೃಜನಾತ್ಮಕ ದೃಶ್ಯ ವಿನ್ಯಾಸಕಿ ಪ್ರತೀಕ್ಷಾ ರವಿಶಂಕರ್: ಛಾಯಾಗ್ರಹಣದ ಸೂಕ್ಷ್ಮ ಎಳೆಗಳನ್ನು ದೃಶ್ಯ ವಿನ್ಯಾಸದಲ್ಲಿ ಅಳವಡಿಕೆ
19/10/2023, 19:57
ಬೆಂಗಳೂರು(reporterkarnataka.com): ಬೆಂಗಳೂರಿನ ಸೃಜನಾತ್ಮಕ ದೃಶ್ಯ ವಿನ್ಯಾಸಕಿ ಪ್ರತೀಕ್ಷಾ ರವಿಶಂಕರ್ ಕಲೆ ಮತ್ತು ವಿನ್ಯಾಸ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಛಾಯಾಗ್ರಹಣದಿಂದ ಪ್ರಾರಂಭವಾದ ಅವರ ಆಸಕ್ತಿ ನ್ಯೂಯಾರ್ಕ್ ನಗರದ ಪಾರ್ಸನ್,’ವಿಶ್ವ ವಿದ್ಯಾಲಯದಲ್ಲಿ ಸಂವಹನ ವಿನ್ಯಾಸ ಪದವಿಯಲ್ಲಿ ತನಕ ಸಾಗಿ ಬಂದ ಹಾದಿ ಖಂಡಿತ ಶ್ಲಾಘನೀಯ.
ಪ್ರತೀಕ್ಷಾರವರ ಶೈಕ್ಷಣಿಕ ಪಯಣ ಬೆಂಗಳೂರಿನ MCC ಕಾಲೇಜಿನಲ್ಲಿ ಪದವಿ ಪಡೆಯುವದರಲ್ಲಿ ಮೊಳಕೆ ಒಡೆಯಿತು. ಪ್ರಪಂಚದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ತಮ್ಮದೇ ವಿಶಿಷ್ಟ ವಿನ್ಯಾಸಗಳಲ್ಲಿ ಹಿಡಿದಿಡುವ ಅತ್ಯಾಕರ್ಷಣೆ ಅವರನ್ನು ದೃಶ್ಯ ಮಾಧ್ಯಮದಲ್ಲಿ ಹೆಚ್ಚಿನದನ್ನು ಸಾಧಿಸಲು ಪ್ರೇರೇಪಿಸಿತು. ಇದಕ್ಕಾಗಿ ಅವರು ಆಯ್ದುಕೊಂಡಿದ್ದು ಸದಾ ಗಿಜಿಗುಟ್ಟುವ, ಕಲೆ, ದೃಶ್ಯ ಮಾಧ್ಯಮದಲ್ಲಿ ವಿಶೇಷ ಸ್ಥಾನ ಪಡೆದಿರುವ ನ್ಯೂಯಾರ್ಕ್ ನಗರವನ್ನು. ನ್ಯೂಯಾರ್ಕ್ ನಗರ ಬೇರೆಲ್ಲ ಪ್ರದೇಶಗಳಿಗಿಂತ ಕಲೆ ಮತ್ತು ವಿನ್ಯಾಸದಲ್ಲಿ ಹಲವಾರು ಮೈಲಿಗಳಷ್ಟು ಮುಂದಿದೆ. ಈ ನಗರದ ವೈವಿದ್ಯತೆ ಹಾಗೂ ಪ್ರತಿಭಾ ಪುರಸ್ಕಾರ ಒಂದು ದೊಡ್ಡ ವರ. ಸಂಸ್ಕøತಿಯ ಒಡನಾಟ ಸಂವಹನ ಪ್ರಕ್ರಿಯೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮತ್ತು ಭಿನ್ನ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು.
ಈಗ ಪ್ರತೀಕ್ಷಾ “ದಿ ಕಲ್ಟಿವಿಸ್ಟ್ ” ಎನ್ನುವ ಸಾಂಸ್ಕೃತಿಕ ಕೇಂದ್ರದಲ್ಲಿ ದೃಶ್ಯ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ವಿಶಿಷ್ಟ ದುಬಾರಿ ಕಲಾಕೃತಿಗಳನ್ನು ಹಾಗೂ ಜಗತ್ತಿನ ಶ್ರೇಷ್ಠ ಕಲಾವಿದರನ್ನು ತನ್ನ ಸದಸ್ಯರುಗಳಿಗೆ ಪರಿಚಯಿಸುವಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಪ್ರತೀಕ್ಷಾ ರವರಿಗೆ ಜಗತ್ತಿನ ಶ್ರೇಷ್ಠ ಕಲಾವಿದರಾದ ಶಾಝಿಯ ಸಿಕಂದರ್, ಕ್ಯಾರೋಲಿನ್ ಕೆಂಟ್, ತ್ರೆಯೆಸ್ಟರ್ ಗೇಟ್ಸ್, ಬೋಸ್ಕೋ ಸೋಧಿ ಲುಸಿವ್ ಹಿರ್ರೋ ಮುಂತಾದವರೊಂದಿಗೆ ಒಡನಾಟ ಹೊಂದಿದ್ದಾರೆ. ಈ ಪ್ರಸಿದ್ಧರ ಸಹಕಾರದೊಂದಿಗೆ ಕೆಲಸ ಮಾಡುವ ಸುಸಂದರ್ಭದಲ್ಲಿ ಅಸಾಧಾರಣ, ಅತಿ ವಿಶೇಷ ವಿನ್ಯಾಸಗಳು ಹೊರ ಹೊಮ್ಮಿದೆ. ಅವರು ಛಾಯಾಗ್ರಹಣದ ಸೂಕ್ಷ್ಮ ಎಳೆಗಳನ್ನ ದೃಶ್ಯ ವಿನ್ಯಾಸದಲ್ಲಿ ಅಳವಡಿಸಿಕೊಂಡಿದ್ದು ಅವರ ವಿನ್ಯಾಸ, ಬೇರೆ ವಿನ್ಯಾಸಿಗರಿಗಿಂತ ಪ್ರತ್ಯೇಕವಾಗಿ ಕಾಣಿಸಿತು. ವಿಶ್ವವಿಖ್ಯಾತ ಛೆಫ್ಸ್ – ಡಾಮಿನಿಕ್ ಕ್ರೆನ್ ಹಾಗೂ ಜೊಸೆ ಆಂಡ್ರೆಸ್ ಅವರಂತ ಹೆಸರಾಂತ ಸಂಸ್ಥೆಗಳಲ್ಲಿ ವಿನ್ಯಾಸ ಮಾಡಿದ್ದು, ನಿರ್ವಹಣೆಯ ಅನುಭವದಲ್ಲಿ ಕಲಿತಿದ್ದು ಅಪಾರ. ಬ್ರ್ಯಾಂಡ್ಗಳು ಮತ್ತು ಕಲಾವಿದರ ನಿರಂತರ ಸಹಕಾರದಿಂದ, ಎಲ್ಲಾ μÉೀರುದಾರರಿಗೆ ತೃಪ್ತಿಯಾಗುವ ವಿನ್ಯಾಸಗಳನ್ನು ಮಾಡಲು ಸಾಧ್ಯವಾಯಿತು. “ಕಲ್ಟಿವಿಸ್ಟ್ ” ಸಂಸ್ಥೆಯಲ್ಲಿ ಅವರ ಕೆಲಸ ಸಾಂಪ್ರದಾಯಿಕ ವಿನ್ಯಾಸಗಳಿಗಳಿಗಷ್ಟೇ ಸೀಮಿತವಾಗಿಲ್ಲ. ಇಮೇಲ್ ಟೆಂಪ್ಲೇಟ್ಸ್, ಆಪ್ಸ್ ಹಾಗೂ ವೆಬ್ಸೈಟ್ – ಎಲ್ಲ ಜವಾಬ್ದಾರಿ ಅವರದೇ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪ್ರತೀಕ್ಷಾ ರವಿಶಂಕರ್.
ತಮ್ಮ ರಂಗದಲ್ಲಿ ನಿರ್ವಹಿಸುತ್ತಿರುವ ವೈವಿಧ್ಯ ಕ್ಷೇತ್ರ, ಸೃಜನಶೀಲ ಮನೋಭಾವ, ಹಲವಾರು ಖ್ಯಾತ ಬ್ರಾಂಡ್ಗಳ ಸಂಬಂಧ ಮತ್ತು ಒಡನಾಟ ಪ್ರತೀಕ್ಷಾರವನ್ನು ಅವರ ಕಾರ್ಯಕ್ಷೇತ್ರದಲ್ಲಿ ಭಿನ್ನವಾಗಿ ನಿಲ್ಲಿಸುತ್ತದೆ. ಕ್ಷಿಪ್ರ ವಿಕಾಸನಗೊಳ್ಳುತ್ತಿರುವ ತಂತ್ರಾಂಶಗಳ ಪ್ರಪಂಚದಲ್ಲಿ ಹಲವಾರು ಆಯಾಮಗಳಲ್ಲಿ ತಂತ್ರಾಂಶಗಳ ನಿರ್ವಹಣಾ ಸಾಮಥ್ರ್ಯ ಎಲ್ಲೆ ಇರದ ಸಾಧ್ಯಸಾಧ್ಯಗಳ ಸಂವಹನ ವಿನ್ಯಾಸ ಒಂದು ಅತ್ಯಮೂಲ್ಯ ಕೌಶಲ್ಯ. ಬೆಂಗಳೂರಿನಲ್ಲಿ ವಿನಮ್ರ ವಿದ್ಯಾರ್ಥಿಯಾಗಿ ಪ್ರಾರಂಭಿಸಿದ ಪ್ರತೀಕ್ಷಾರವರ ಪ್ರಯಾಣ, ಕಲೆ ವಿನ್ಯಾಸಗಳ ಹೃದಯ ಭಾಗವಿರುವ ನ್ಯೂಯಾರ್ಕ್ ನಲ್ಲಿ ನಿರ್ವಹಿಸುತ್ತಿರುವ ಪ್ರಸಕ್ತ ಪಾತ್ರದ ತನಕ, ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಈ ಮಾಧ್ಯಮದಲ್ಲಿ ಕೋಡಿಂಗ್ನಿಂದ ದೃಶ್ಯ ಕಲೆಗಳುವರೆಗೂ -ಬಹಳ ಆಯ್ಕೆಗಳಿವೆ. ಅದರಲ್ಲೂ ನ್ಯೂಯಾರ್ಕ್ ನಂತಹ ನಗರದಲ್ಲಿ. ಉತ್ಪನ್ನ ವಿನ್ಯಾಸ, ಗ್ರಾಫಿಕ್ ಡಿಸೈನ್ ಹಾಗು ಫ್ರಂಟ್ – ಎಂಡ್ ಇಂಜಿನಿಯರಿಂಗ್ ಎಲ್ಲವು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಕಲಾವಿದರೂ ಆಗಬಹುದು. ಆಯ್ಕೆಗಳು ಹಲವಾರು, ಹಿಂಜರಿಕೆ ಇಲ್ಲದೆ ಮುನ್ನುಗ್ಗಿರಿ ಎಂದು ಯುವ ಪೀಳಿಗೆಗೆ ಮಾಹಿತಿ ನೀಡುತ್ತಾರೆ ಪ್ರತೀಕ್ಷಾ ರವಿಶಂಕರ್.