8:44 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಟಯರಿಗೆ ನಟ್ ಹಾಕದೆ ಬಸ್ ಓಡಾಟ: ಇದು ಚಿಕ್ಕಮಗಳೂರು ಡಿಪೋ ಕೆಎಸ್ಸಾರ್ಟಿಸಿ ಸ್ಪೆಷಾಲಿಟಿ; ಸಾರಿಗೆ ಸಚಿವರೇ ಹೆಚ್ಚು ಕಡಿಮೆ ಆದ್ರೆ ಯಾರು ಜವಾಬ್ದಾರಿ?

17/10/2023, 21:57

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಟಯರಿಗೆ ನಟ್ ಬಿಗಿಯದೇ ಬಸ್ ಓಡಿಸುವುದನ್ನು ನೀವು ಎಲ್ಲದರು ನೋಡಿದ್ದೀರಾ? ನೋಡದಿದ್ದರೆ ಪರವಾಗಿಲ್ಲ, ಈಗ ನೋಡಿ ಬಿಡಿ. ಕೆಎಸ್ಸಾರ್ಟಿಸಿ ಬಸ್ಸನ್ನು ಟಯರಿಗೆ ನೆಟ್ ಹಾಕದೆ ಓಡಿಸಿದ ಘಟನೆ ನಡೆದಿದೆ.
ಇದು ನಡೆದದ್ದು ಚಿಕ್ಕಮಗಳೂರು-ಆಲ್ದೂರು ಮಾರ್ಗದ ಲೋಕಲ್ ಬಸ್ಸಿನಲ್ಲಿ.ಸರ್ಕಾರಿ ಬಸ್ಸಿನ ಚಕ್ರಕ್ಕೆ ನಟ್ ಗಳೇ ಇಲ್ಲ. ಇದೊಂದು ಸಾರಿಗೆ ಇಲಾಖೆಯ ಬಹು ದೊಡ್ಡ ಬೇಜವಾಬ್ದಾರಿಯಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.
ಬಸ್ಸಿನ ಟಯರಿಗೆ 8 ನಟ್ ಇರಬೇಕಾದ ಜಾಗದಲ್ಲಿ 3 ನಟ್ ಮಾತ್ರ ಹಾಕಿ ಬಸ್ ಓಡಿಸಲಾಗಿದೆ.
ಅದೇ ಸ್ಥಿತಿಯಲ್ಲಿ ಬಸ್ಸನ್ನ ಚಾಲಕ ಓಡಿಸಿದ್ದಾರೆ. ನಿತ್ಯ ಶಾಲಾ-ಕಾಲೇಜು ಮಕ್ಕಳು, ವಿವಿಧ ಸಂಸ್ಥೆ ಗಳಲ್ಲಿ ಕೆಲಸ ಮಾಡುವವರು ಇದರಲ್ಲಿ ಪ್ರಯಾಣಿಸುತ್ತಾರೆ. ಮೊದಲೇ ಮಲೆನಾಡು, ಎತ್ತರದ ಬೆಟ್ಟ, ಆಳವಾದ ಕಂದಕದ ನಡುವೆ ಹಾವಿನಂತೆ ಸರಿದಾಡುವ ರಸ್ತೆಗಳು. ಏನಾದ್ರು ಹೆಚ್ಚು-ಕಡಿಮೆಯಾದರೆ ಜವಾಬ್ದಾರಿ ಯಾರು…?
ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಡಿಪೋಗೆ ಸೇರಿದ ಸರ್ಕಾರಿ ಬಸ್ ಇದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು