10:01 PM Tuesday20 - January 2026
ಬ್ರೇಕಿಂಗ್ ನ್ಯೂಸ್
ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ; ಕೋಟಿ ಕೊಟ್ಟು ಮಂಗಳೂರಿಗೆ ಬಂದ ಅಧಿಕಾರಿಯಿಂದ ಜನರ ಸುಲಿಗೆ: ಶಾಸಕ ಡಾ. ಭರತ್ ಶೆಟ್ಟಿ ಗರಂ

17/10/2023, 20:58

ನವಮಂಗಳೂರು(reporterkarnataka.com): ಕೋಟಿ ಕೊಟ್ಟು ಮಂಗಳೂರಿಗೆ ಬಂದ ಅಧಿಕಾರಿಯೊಬ್ಬರು ಜನರಿಂದ ಸುಲಿಗೆ ಮಾಡುವ ಮಾಹಿತಿ ಬರುತ್ತಿದೆ. ಹಾಗೆ ರಾಜ್ಯ ಖಜಾನೆಯಲ್ಲಿ ಹಣವಿಲ್ಲದ ಕಾರಣ ನಮಗೆ ಅನುದಾನ ಸಿಗುತ್ತಿಲ್ಲ. ಈ ಸರಕಾರದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಲಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.

ಭಾರತೀಯ ಜನತಾ ಪಕ್ಷ ಮಂಗಳೂರು ಉತ್ತರ ಮಂಡಲದ ವತಿಯಿಂದ ಕಾಂಗ್ರೆಸ್ ಭೃಷ್ಟಾಚಾರದ ವಿರುದ್ದ ಕಾವೂರು ಜಂಕ್ಷನ್‍ನಲ್ಲಿ ಮಂಗಳವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
100 ಕೋಟಿ ಕಪ್ಪು ಹಣ ಕಾಂಗ್ರೆಸ್ ವ್ಯಕ್ತಿಗಳ ಮನೆಯಲ್ಲಿ ಪತ್ತೆಯಾಗಿದೆ. ಇದು ಚುನಾವಣೆಗೆ ಹಂಚಲು ತೆಗೆದಿಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಕನಿಷ್ಠ 25 ಲಕ್ಷ ಹಣ ನೀಡದೆ ದಾಖಲೆ ಸಿಗದ ಸ್ಥಿತಿಯಿದೆ ಎಂದರು.
6 ತಿಂಗಳಲ್ಲಿ ಶಾಸಕರಿಗೆ ಹಣ ಬಿಡುಗಡೆ ಮಾಡುವ ಯೋಗ್ಯತೆ ಇಲ್ಲ. ಕನಿಷ್ಠ 50 ಸಾವಿರ ರೂ. ತೋಡು ಮಾಡಲು ಹಣವಿಲ್ಲ. ನಮ್ಮ ಸರಕಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರಕ್ಕೆ 2 ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಡಾ. ಭರತ್ ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಕಾರ್ಪೋರೇಟರ್ ಮನೆಯಲ್ಲಿ ದೊರಕಿದ ಹಣ ಲಂಚಾವತಾರದ ಹಣವಾಗಿದೆ. ಗುತ್ತಿಗೆದಾರರ 600 ಕೋಟಿಯನ್ನು ಕಮಿಷನ್ ಆಧಾರದಲ್ಲಿ ಬಿಡುಗಡೆ ಮಾಡಿ ಆ ಹಣ ಐಟಿ ದಾಳಿಯಲ್ಲಿ ಸಿಕ್ಕಿದೆ. ಇದಕ್ಕೆ ಪುರಾವೆಯೂ ಇದ್ದು ಕಾಂಗ್ರೆಸ್ ನಾಯಕರಿಗೆ ಮತ್ತೆ ತಿಹಾರ್ ಜೈಲ್ ಕೋಣೆ ಸಿದ್ದವಾಗುತ್ತಿದೆ ಎಂದರು.

ಹಿಂದೆ ನಮ್ಮ ಸರಕಾರಕ್ಕೆ ಪೇ ಸಿಎಂ, 40 ಪರ್ಸೆಂಟ್ ಸರಕಾರ ಎಂದು ಸುಳ್ಳು ಆರೋಪ ಮಾಡಿದರು. ಸಾಕ್ಷ್ಯ ನೀಡಿ ಎಂದರೆ ಅದೂ ಇರಲಿಲ್ಲ. 4 ತಿಂಗಳಲ್ಲಿ ಸಾಕ್ಷ್ಯ ಇಲ್ಲದೆ ಯಾವುದೇ ಮಂತ್ರಿಯನ್ನು ಜೈಲಿಗೆ ಕಳಿಸಲು ವಿಫಲರಾದರು. ಇದೀಗ ಕಾಂಗ್ರೆಸ್ ಸರಕಾರವೇ 80 ಪರ್ಸೆಂಟ್ ಸರಕಾರವಾಗಿದೆ. ಹಣ ಪಡೆದ ಬಗ್ಗೆ ಚೀಟಿಯೂ ಐಟಿ ಅಧಿಕಾರಿಗಳಿಗೆ ದೊರೆತಿದೆ. ಪಂಚ ರಾಜ್ಯ ಚುನಾವಣೆಗೆ ಕಳಿಸಲು ಇಟ್ಟ ಹಣವಾಗಿದೆ ಎಂಬುದು ಸ್ಪಷ್ಟ. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್‍ಗೆ ಎಟಿಎಂ ಆಗಿದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಈ ಮೂಲಕ ತಮ್ಮ ಸಾಚಾತನ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಹಣ ನಿಗದಿ ಪಡಿಸಲಾಗಿದೆ. ವರ್ಗಾವಣೆ ದಂಧೆಯಾಗಿ ಬೆಳೆದು ನಿಂತು ತಾಲೂಕು ಕಚೇರಿಯಿಂದ ಎಲ್ಲೆಡೆ ಲಂಚ ಕೇಳುವ ಪರಿಸ್ಥಿತಿ ಉಂಟಾಗಿದೆ.
ಮೈಸೂರು ದಸರಾದಲ್ಲಿ ಕಲಾವಿದನಿಂದ ಕಮಿಷನ್ ಪಡೆಯಲು ಮುಂದಾದ ಇಂತಹ ಕೆಟ್ಟ ಸರಕಾರ ಬೇರೆ ಇರಲಿಕ್ಕಿಲ್ಲ. ಇಂದು ಅಭಿವೃದ್ಧಿಗೆ ಹಣವೇ ಇಲ್ಲವಾಗಿದೆ. 15 ದಿನದಲ್ಲಿ ರಾಜ್ಯದಲ್ಲಿ ವಿದ್ಯುತ್ ಇಲ್ಲದೆ ಕತ್ತಲೆ ರಾಜ್ಯವಾಗುತ್ತಿದೆ. ಉಚಿತ ವಿದ್ಯುತ್ ಬಿಡಿ, ಕರೆಂಟೇ ಯಾರಿಗೂ ಇಲ್ಲವಾಗಿದೆ. 32 ಮಂದಿ ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿವೃದ್ಧಿಗೆ ಹಣವಿಲ್ಲ. ಇದ್ದ ಖಜಾನೆಯೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮನೆಯಲ್ಲಿ ಇರುವ ಹಾಗಿದೆ ಎಂದು ಹೇಳಿದರು.
ಬಿಜೆಪಿ ಕಾಂಗ್ರೆಸ್ ಸರಕಾರದ ಲಂಚಾವತಾರದ ವಿರುದ್ದ ರಾಜ್ಯವ್ಯಾಪಿ ಹೋರಾಟ ನಡೆಸಲು ನಿರಂತರವಾಗಿ ನಡೆಯಲಿದೆ ಎಂದರು.
ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ತಿಲಕ್ ರಾಜ್ ಕೃಷ್ಣಾಪುರ,ಕಸ್ತೂರಿ ಪಂಜ, ಪೂಜಾ ಪೈ, ರಣ್‍ದೀಪ್ ಕಾಂಚನ್, ಉಪ ಮೇಯರ್ ಸುನಿತಾ, ಬಿಜೆಪಿ ಮನಪಾ ಸದಸ್ಯರು, ಜಿಲ್ಲೆಯ ಪ್ರಮುಖರು,ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು