ಇತ್ತೀಚಿನ ಸುದ್ದಿ
ಭ್ರಷ್ಟಾಚಾರಕ್ಕೆ ಸಾಕ್ಷಿಯಾದ ಪರಶುರಾಮ ಮೂರ್ತಿ ಬೈಲೂರಿನ ಥೀಮ್ ಪಾರ್ಕ್ ನಿಂದ ಎತ್ತಂಗಡಿ: ರಾತೋರಾತ್ರಿ ಲಾರಿಯಲ್ಲಿ ಸಾಗಾಟ!!
14/10/2023, 00:01

ಕಾರ್ಕಳ(reporterkarnataka.com): ರಾಜಕೀಯ ಮೇಲಾಟ ಹಾಗೂ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿರುವ
ಬೈಲೂರಿನ ವಿವಾದಿತ ಪರಶುರಾಮ ಮೂರ್ತಿಯನ್ನು ರಾತೋರಾತ್ರಿ ತೆರವುಗೊಳಿಸಿ ಸಾಗಿಸಲಾಗಿದೆ. ಇದರೊಂದಿಗೆ ಮತ್ತೊಂದು ಸುತ್ತಿನ ರಾಜಕೀಯ ಗುದ್ದಾಟಕ್ಕೆ ಮುನ್ನುಡಿ ಬರೆದಂತಾಗಿದೆ.
ಲಾರಿಯಲ್ಲಿ ರಾತೋರಾತ್ರಿ ಪರಶುರಾಮ ಮೂರ್ತಿ ತೆರವುಗೊಳಿಸಿ ಸಾಗಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಅರೊಪಿಸಿದ್ದಾರೆ. ಇನ್ನೊಂದೆಡೆ ಕಾಮಗಾರಿ ಅವ್ಯವಹಾರದ ಬಗ್ಗೆ ಪ್ರತಿಭಟನೆ ನಡೆಸಲು ಅ.14 ರಂದು ಕಾಂಗ್ರೆಸ್ ಪಕ್ಷದ ಸಭೆ ಕರೆಯಲಾಗಿದೆ. ಈ ನಡುವೆ
ಬೆಟ್ಟದಲ್ಲಿರುವ ಪ್ಲಾಸ್ಟಿಕ್ ಮುಚ್ಚಿಟ್ಟ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.
ಕಾಮಗಾರಿ ಸುಗಮವಾಗಿ ನಡೆಸುವ ಸಲುವಾಗಿ ಭದ್ರತೆಗಾಗಿ ಪೋಲಿಸರನ್ನು ನಿಯೋಜಿಸಲಾಗಿದ್ದು , ಉಮಿಕಲ್ ಬೆಟ್ಟದ ಮೇಲೆ ಸಾಗಲು ಪ್ರವಾಸಿಗರಿಗೆ, ವೀಕ್ಷಕರಿಗೆ ನವೆಂಬರ್ ತಿಂಗಳ ಅಂತ್ಯದ ವರೆಗೆ ಕಾರ್ಕಳ ತಹಶಿಲ್ದಾರರ್ ನಿಷೇಧ ಹೇರಿದ್ದರು.
ಇತ್ತೀಚೆಗೆ ಉಡುಪಿ ಜಿಲ್ಲೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರಶುರಾಮ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಶುರಾಮ ವಿವಾದಿತ ಮೂರ್ತಿಯ ಕಾಲಿನ ಭಾಗ ಅಸಲಿಯಾಗಿದ್ದು ಮೇಲಿನ ಭಾಗವು ನಕಲಿಯಾಗಿತ್ತು ಎಂದು ಹೇಳಿಕೆ ನೀಡಿದ್ದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ತಡೆ ಅರ್ಜಿ ತಿರಸ್ಕಾರ: ಪರಶುರಾಮ ಥೀಮ್ ಪಾರ್ಕನ್ನು ಗೋಮಾಳ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಇದಕ್ಕೆ ತಡೆ ನೀಡಬೇಕು ಎಂದು ಪ್ರಮೋದ್ ಮುತಾಲಿಕ್ ಮತ್ತು ಬೆಂಗಳೂರಿನ ಎಸ್. ಭಾಸ್ಕರನ್ ಎನ್ನುವರು ಕೊರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾ ಮಾಡಿದೆ. .
ಪ್ರಮೋದ್ ಮುತಾಲಿಕ್ ಧಾರವಾಡ ಹಾಗೂ ಎಸ್. ಭಾಸ್ಕರನ್ ಬೆಂಗಳೂರಿನವರು. ಕಲ್ಪನೆಗಳ ಆಧಾರದಲ್ಲಿ ಈ ಅರ್ಜಿ ಹಾಕಲಾಗಿದೆ. ಮೂರ್ತಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಈ ಹಿಂದೆ ಆಕ್ಷೇಪ ಹಾಕದೆ, ಮುಗಿಯುವ ಹಂತದಲ್ಲಿ ತಡವಾಗಿ ಕೋರ್ಟ್ ಗೆ ಬಂದಿದ್ದಾರೆ ಎಂದು ಪೀಠ ಹೇಳಿತ್ತು.
ಸಮಾನ ಮನಸ್ಕರ ತಂಡದಿಂದ ಪ್ರತಿಭಟನೆ : ಕಾರ್ಕಳ ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಸಾರ್ವಜನಿಕವಾಗಿ ಗುಣಮಟ್ಟ ಪರಿಶೀಲನೆಯನ್ನು ಸಾರ್ವಜನಿಕ ಸಮ್ಮುಖದಲ್ಲಿ ಮಾಡಬೇಕು. ಅದರ ಸತ್ಯಾಸತ್ಯತೆಯನ್ನು ಕಾರ್ಕಳ ಜನತೆಗೆ ತಿಳಿಸಬೇಕು ಎಂದು ಸಮಾನ ಮನಸ್ಕರ ತಂಡವೊಂದು ಕಾರ್ಕಳ ತಹಶಿಲ್ದಾರರ್ ಕಚೇರಿ ಹಾಗೂ ಪರಶುರಾಮ ಥೀಮ್ ಪಾರ್ಕ್ ಬಳಿ ಒಂದು ತಿಂಗಳ ಹಿಂದೆ ಪ್ರತಿಭಟನೆ ನಡೆಸಿತ್ತು.
ರಾತೋರಾತ್ರಿ ಪರಶುರಾಮ ಮೂರ್ತಿ ತೆರವುಗೊಳಿಸಿ ಲಾರಿಯಲ್ಲಿ ಸಾಗಿಸಲಾಗಿದ್ದು ಆ ಮೂಲಕ ಬಿಜೆಪಿಯ ಬಣ್ಣ ಬಯಲಾಗಿದೆ. ಇನ್ನೊಂದೆಡೆ ಕಾಮಗಾರಿ ಅವ್ಯವಹಾರದ ಬಗ್ಗೆ ಪ್ರತಿಭಟನೆ ನಡೆಸಲು ಅ.14 ರಂದು ಕಾಂಗ್ರೆಸ್ ಪಕ್ಷದ ಸಭೆ ಕರೆಯಲಾಗಿದೆ ಎಂದು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಹೇಳಿದ್ದಾರೆಮ
ಕಾಂಗ್ರೆಸ್‌ನ ಮಾನಸಿಕತೆಯ ದ್ವಿಪಾತ್ರದ ನಟನೆಗೆ ಕೊನೆಗೂ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಮತ್ತದರ ಬಿ ಟೀಂನ ಸುಳ್ಳು, ಅಪಪ್ರಚಾರದ ವಿರುದ್ಧ ನೈಜ ಹಿತಾಶಕ್ತಿಗೆ ಗೆಲುವಾಗಿದೆ ಎಂದು ಈ ನಡುವೆ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ತಿಳಿಸಿದ್ದಾರೆ.