10:30 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಬೆಳ್ಳಿಹಬ್ಬ: ಅಕ್ಟೋಬರ್ 13 ಮತ್ತು 14ರಂದು ‘ಮುಲ್ಲರ್ ಮೆಡಿ ಎಕ್ಸ್ಪೋ -2023’

12/10/2023, 19:06

ಮಂಗಳೂರು(reporterkarnataka.com): ನಗರದ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯದ ಬೆಳ್ಳಿಹಬ್ಬದ ಅಂಗವಾಗಿ ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರವು ಅಕ್ಟೊಬರ್ 13 ಮತ್ತು 14ರಂದು ಎರಡು ದಿನಗಳ ವಸ್ತು ಪ್ರದರ್ಶನ ಏರ್ಪಡಿಸಿದೆ.
ವಸ್ತು ಪ್ರದರ್ಶನದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಸಂಶೋಧನಾ ಯೋಜನೆಗಳು ಮತ್ತು ಮಾದರಿಗಳ ಪ್ರಸ್ತುತಿಯ ಸ್ಪರ್ಧೆ ಇದೆ. ಆರೋಗ್ಯದ ಬಗ್ಗೆ ಧನಾತ್ಮಕ ಪ್ರಚಾರ , ಆಹಾರ ಮತ್ತು ಪೌಷ್ಟಿಕತೆ, ಜಲ ಮತ್ತು ನೈರ್ಮಲ್ಯ ,ವೈದ್ಯಕೀಯ ಉಪಕರಣಗಳು, ಪರಿಸರ ಮಾಲಿನ್ಯ ಈ ವಿಷಯಗಳಲ್ಲಿ ಅತ್ತ್ಯುತ್ತಮ ಪ್ರಸ್ತುತಿಗಳಿಗೆ ಬಹುಮಾನಗಳಿವೆ. ವಿವಿಧ ಶಾಲಾ ಕಾಲೇಜುಗಳ 131
ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. 6ನೇ ತರಗತಿಯಿಂದ 8ನೇ ತರಗತಿ, 9ರಿಂದ 12, ಡಿಪ್ಲೋಮ ಮತ್ತು ವೃತ್ತಿಪರ ಶಿಕ್ಷಣ ಹೀಗೆ ಮೂರೂ ವಿಭಾಗಗಳಲ್ಲಿ ಪ್ರತ್ಯೇಕವಾಗಿ ವಿಜೇತರನ್ನು ನಿರ್ಧರಿಸಲಾಗುತ್ತದೆ.


ಇದರ ಜೊತೆಗೆ ಫಾದರ್ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಭಾಗವಹಿಸುವಿಕೆಯಲ್ಲಿ ವಿವಿಧ ಮಾದರಿಗಳನ್ನು ಒಳಗೊಂಡ ವಸ್ತು ಪ್ರದರ್ಶನ ನಡೆಯಲಿದೆ. ಅಲ್ಲದೇ, ಸಾರ್ವಜನಿಕರಿಗಾಗಿ ಅರೋಗ್ಯ ತಪಾಸಣಾ ವ್ಯವಸ್ಥೆಯು ಇರಲಿದೆ.
ಈ ವಸ್ತುಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ. ಮಕ್ಕಳು ಮತ್ತು ಎಲ್ಲಾ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದೇ ವಸ್ತುಪ್ರದರ್ಶನದ ಮುಖ್ಯ ಉದ್ದೇಶವಾಗಿದೆ.
ಅಕ್ಟೊಬರ್ 13 ರಂದು 10 ಗಂಟೆಗೆ ಈ ಕಾರ್ಯಕ್ರಮಗಳ ಉದ್ಘಾಟನೆ ನಡೆಯುತ್ತದೆ. ಎನ್ ಐ ಟಿ ಕೆ ಸುರತ್ಕಲ್ ಇದರ ಸಂಶೋಧನಾ ನಿರ್ದೇಶಕರಾದ ಡಾ. ಸತ್ಯಬೋಧ್ ಕುಲಕರ್ಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾ. ರಿಚರ್ಡ್ ಅಲೋಸಿಯಸ್ ಕುವೆಲ್ಲೊ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತಾಧಿಕಾರಿಗಳು, ಆಡಳಿತ ಮಂಡಳಿಯ ಸದಸ್ಯರು , ಸಂಸ್ಥೆಗಳ ಮುಖ್ಯಸ್ಥರು , ಶಿಕ್ಷಕರು , ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ .
ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಸಂಜೀವ ರೈ ಅವರ ಸಂಯೋಜನೆಯಲ್ಲಿ ನಡೆಯುವ ಎರಡು ದಿನಗಳ ಈ ವಿಜ್ಞಾನ ಹಬ್ಬಕ್ಕೆ ಎಲ್ಲರಿಗೂ ಸ್ವಾಗತವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು