2:22 AM Saturday2 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

ಕಾಂಗ್ರೆಸ್ ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ: ಬಿಪಿನಚಂದ್ರ ಪಾಲ್ ನಕ್ರೆ

11/10/2023, 21:34

ಉಡುಪಿ(reporterkarnataka.com): ಕಾಶ್ಮೀರವಾಗಲಿ, ಪ್ಯಾಲೆಸ್ತೈನ್ ಆಗಲಿ ಅಥವಾ ಅಫಘಾನಿಸ್ತಾನವೇ ಆಗಲಿ ಕಾಂಗ್ರೆಸ್ ಯಾವತ್ತೂ ಮಾನವ ಹಕ್ಕು,ಸ್ವಾಯತ್ತತೆ ಮತ್ತು ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕಾರ್ಕಳ ಶಾಸಕ, ಮಾಜಿ ಸಚಿವ ಸುನೀಲ್ ಕುಮಾರ್ ನೀಡಿದ ಹೇಳಿಕೆಯೊಂದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದ.
ಇತಿಹಾಸ ಅರಿಯದವರಿಗೆ ವರ್ತಮಾನವು ಕೇವಲ ವಿಪ್ಲವವಾಗಿ ಕಾಣುತ್ತದೆ. ಪ್ಯಾಲೇಸ್ತೈನ್ ಮತ್ತು ಇಸ್ರೇಲ್ ಸಂಘರ್ಷ 60 ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಫ್ಯಾಲೇಸ್ತೈನಿನ ಸ್ವಾಯತ್ತತೆಯೊಂದಿಗಿನ ಇಸ್ರೇಲಿನ ಸೌಹಾರ್ದಯುತ ರಾಜತಾಂತ್ರಿಕ ಸಂಬಂಧಕ್ಕಾಗಿ, ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ತತ್ವ ಸಿದ್ಧಾಂತದಡಿ ತನ್ನ ಬದುಕನ್ನೆ ಪಣವಿಟ್ಟು ಹೋರಾಡಿದ ಪಿಎಲ್ಒ ನಾಯಕ ದಿ. ಯಾಸರ್ ಅರಾಫತ್ ಹೋರಾಟದ ಐತಿಹಾಸಿಕತೆಯ ನೈಜ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಕಾರ್ಯಕಾರಿಣಿಯಲ್ಲಿ ಪ್ಯಾಲೇಸ್ತೈನಿಯನ್ನರ ಬದುಕಿನ ಕಷ್ಟಕಾಲದಲ್ಲಿ ನಾವಿದ್ದೇವೇ ಎಂದಿದೆ. ಅದರೊಂದಿಗೆ ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿಯನ್ನು ಸ್ಪಷ್ಟ ಶಬ್ದಗಳಿಂದ ಖಂಡಿಸಿದೆ. ಅಷ್ಟಕ್ಕೂ ಅರಬ್ ರಾಷ್ಟ್ರಗಳ ಮುನಿಸಿನ ಪ್ರತಿರೋಧದ ಹೊರತಾಗಿಯೂ ಇಸ್ರೇಲಿನೊಂದಿಗೆ ಭಾರತ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿ ರಾಯಭಾರಿಗಳ ನೇಮಕಾತಿ ಮಾಡಿದ್ದೇ ಕಾಂಗ್ರೆಸ್ ಆಡಳಿತದಲ್ಲಿ. ಪ್ರಧಾನಿ ದಿ. ನರಸಿಂಹ ರಾವ್ ಅವಧಿಯಲ್ಲಿ ಎನ್ನುವುದು ಬಹುಶ ಬಿಜೆಪಿ ನಾಯಕರಿಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತಾವಧಿಯಲ್ಲಿ ದಿ. ಪ್ರಧಾನಿ ಜವಾಹರಲಾಲ್ ನೆಹರು ವಿಶ್ವ ರಾಜತಾಂತ್ರಿಕತೆಗೆ ಪರಿಚಯಿಸಿದ ಪಂಚಶೀಲ ತತ್ವ, ನಿರ್ಲಿಪ್ತ ಧೋರಣೆಯ ತಳಹದಿಯ ಮೇಲೆ ವಿಶ್ವದ ಶಾಂತಿ ಸೌಹಾರ್ದತೆಗೆ ನೀಡಿದ ಕೊಡುಗೆ ಅಪಾರ. ವಿಶ್ವದ ಎದುರು ಉಗ್ರವಾದದ ವಿರುದ್ಧ ಮಾತಾಡುತ್ತಲೆ ಮನೆಯಲ್ಲಿ ಧರ್ಮದ ಬೇರು ಅಗೆದು ರಾಜಕೀಯ ಮಾಡುವ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಉದಾರವಾದದ ಸೃಜನಶೀಲ ರಾಜನೀತಿ ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು