ಇತ್ತೀಚಿನ ಸುದ್ದಿ
ಕಾರ್ಕಳದ ಕಡಾರಿನಲ್ಲಿ ಅಗ್ನಿ ಅನಾಹುತ: 4 ಟನ್ ಕೊಬ್ಬರಿ ಭಸ್ಮ
11/10/2023, 09:34

ಕಾರ್ಕಳ(reporterkarnataka.com): ಕಾರ್ಕಳ ತಾಲೂಕು ಮೂಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊಬ್ಬರಿ ಒಣಗಿಸುವ ಕೊಠಡಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತಕ್ಕೆ 4 ಟನ್ ಕೊಬ್ಬರಿ ಬೆಂಕಿಗಾಹುತಿಯಾಗಿದೆ.
ಮೂಡಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಾರಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಲಾಯಿತು. 4 ಟನ್ ಕೊಬ್ಬರಿ ಬೆಂಕಿಯಿಂದ ನಷ್ಟ ವಾಗಿದೆ ಎಂದು ಮಾಲೀಕರು ತಿಳಿಸಿರುತ್ತಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ. ಸಂಜೀವ್, ಸಿಬ್ಬಂದಿ ಗಳಾದ ಸುರೇಶ್, ಜಯ ಮೂಲ್ಯ , ಹಸನ್ ಸಾಬ್ , ಸುಜಯ್, ವಿನಾಯಕ್ ಪಾಲ್ಗೊಂಡಿದ್ದರು.