ಇತ್ತೀಚಿನ ಸುದ್ದಿ
ನಾನು ಸೋತಿರಬಹುದು ಸತ್ತಿಲ್ಲ, ಕ್ಷೇತ್ರದ ಅಭಿವೃದ್ಧಿಗಾಗಿ ಕೈ ತೊರೆದು ಕಮಲ ಹಿಡಿದಿದ್ದೆ: ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ್
10/10/2023, 21:29
ಹಾವೇರಿ(reporterkarnataka.com): ನಾನು ಸೋತಿರಬಹುದು ಸತ್ತಿಲ್ಲ: ಸೋತರು ಗೆದ್ದರೂ ಜನರ ನಡುವೆ ಇದ್ದು ಅವರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವುದನ್ನು ಬಿಡುವುದಿಲ್ಲ ಎಂದು ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಸಣ್ಣಗುಬ್ಬಿ ಹಿರೇಮಾದಾಪುರ ಗ್ರಾಮದ ಬಳಿ ಕುಮದ್ವತಿ ನದಿಗೆ ತಮ್ಮ ಅವಧಿಯಲ್ಲಿ 17 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಾಂದರ್ (ಬ್ಯಾರೇಜ್ ) ಕಂ ಸೇತುವೆ ವೀಕ್ಷಣೆ ಮಾಡಿ, ಬಳಿಕ ರೈತರು ಸಣ್ಣಗುಬ್ಬಿ ಗ್ರಾಮದ ರೈತ ದೇವರಾಜ್ ನಾಗಣ್ಣನವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.
ತಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ. ತಮಗೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ ತೃಪ್ತಿ ತಂದಿದೆ. ನಾನು ಈ ಬಾರಿ ಸೋತಿರಬಹುದು. ಸೋತರು ನಾನು ಕೆಲಸ ಮಾಡುವುದನ್ನು ಬಿಡುವುದಿಲ್ಲ. ನನ್ನ ರಕ್ತ ಇರುವವರೆಗೂ ಕ್ಷೇತ್ರದಲ್ಲಿ ಜನರ ಸೇವೆ ಮಾಡುವುದು ನಿಲ್ಲಿಸಲ್ಲ ಎಂದು ಬಿ.ಸಿ ಪಾಟೀಲ್ ಅವರು ಹಲವಾರು ವಿಷಯಗಳ ಕುರಿತು ಮಾತನಾಡಿದರು.