8:48 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಶೌರ್ಯ ರಥ ಯಾತ್ರೆ ಹಿನ್ನೆಲೆಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ; ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ ಪರ್ಯಾಯ ಮಾರ್ಗಗಳು ಯಾವುದು ?

09/10/2023, 12:33

ಮಂಗಳೂರು(Reporterkarnataka.com: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಶೌರ್ಯ ಯಾತ್ರಾ ಮೆರವಣಿಗೆ ಮಧ್ಯಾಹ್ನ ಅ.9ರಂದು ಮಧ್ಯಾಹ್ನ 2.00 ಗಂಟೆಗೆ ಮಂಗಳೂರು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ನಗರದ ಕದ್ರಿ ಮೈದಾನದ ವರೆಗೆ ನಡೆಯಲಿದ್ದು, ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಪಿ ವಿ ಎಸ್ ವೃತ್ತದಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ, ಕದ್ರಿ ಕಂಬಳ ಜಂಕ್ಷನ್ ಕಡೆಯಿಂದ ಬಂಟ್ಸ್ ಹಾಸ್ಟೇಲ್‌ ಕಡೆಗೆ, ಮಲ್ಲಿಕಟ್ಟೆ ಕಡೆಯಿಂದ ಬಂಟ್ಸ್ ಹಾಸ್ಟೆಲ್‌ ಕಡೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಕಾರ್ಯಕ್ರಮ ಮುಗಿಯುವ ವರೆಗೆ ನಿಷೇಧಿಸಲಾಗಿದೆ.

ಬದಲಿ ಸಂಚಾರ ವ್ಯವಸ್ಥೆ ಈ ಕೆಳಗಿನಂತಿದೆ :
1. ಪಡೀಲ್ ಮತ್ತು ತಲಪಾಡಿಕಡೆಯಿಂದ ಬರುವ ಎಲ್ಲಾ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಪಂಪ್ ವೆಲ್ ಗೆ ಬಂದು ಪಂಪ್ ವೆಲ್ ನಿಂದ ನಂತೂರು, ಕೆ ಪಿ ಟಿ ಮಾರ್ಗ ಮುಖಾಂತರ ಕೆ ಎಸ್ ಆರ್ ಟಿ ಸಿ ಗೆ ಅಂತೆಯೇ ಕೆ ಎಸ್ ಆರ್ ಟಿ ಸಿ ಯಿಂದ ಹೊರ ಹೋಗುವ ಎಲ್ಲಾ ಬಸ್ಸುಗಳು ಕೆ ಪಿ ಟಿ, ನಂತೂರು, ಪಂಪ್ ವೆಲ್ ಮುಖಾಂತರ ಮುಂದುವರಿಯುವುದು.

2. ನಂತೂರು ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಶಿವಭಾಗ್, ಹಾರ್ಟಿಕಲ್ಚರ್, ಬೆಂದೂರು, ಕರಾವಳಿ, ಕಂಕನಾಡಿ ಜಂಕ್ಷನ್ ತಲುಪಿ ಫಳ್ನೀರ್ ರಸ್ತೆ ಮುಖಾಂತರ ಸ್ಟೇಟ್ ಬ್ಯಾಂಕ್ ಕಡೆ ಮುಂದುವರಿಯುವುದು.

3. ಪಂಪ್ ವೆಲ್ ಕಡೆಯಿಂದ ಸ್ಟೇಟ್ ಬ್ಯಾಂಕ್‌ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು ಕಂಕನಾಡಿ ಜಂಕ್ಷನಿಗೆ ಬಂದು ಸ್ಟೇಟ್ ಬ್ಯಾಂಕ್‌ ಕಡೆಗೆ ಮುಂದುವರಿಯುವುದು.

4. ಕಾವೂರು, ಬೋಂದೇಲ್‌ ಕಡೆಯಿಂದ ಬರುವ ಬಸ್ಸುಗಳು ಹಾಗೂ ಇತರ ವಾಹನಗಳು ಕೆ ಎಸ್ ಆರ್ ಟಿ ಸಿ, ಲಾಲ್ ಭಾಗ್, ಪಿ ವಿ ಎಸ್. ಕೆ ಎಸ್ ಆರ್ ರಸ್ತೆ ಮುಖಾಂತರ ಹಂಪನಾ ಕಟ್ಟೆ ಗೆ ಬಂದು ಸ್ಟೇಟ್ ಬ್ಯಾಂಕ್ ಕಡೆಗೆ ಮುಂದುವರಿಯುವುದು.

5. ಸ್ಟೇಟ್ ಬ್ಯಾಂಕ್ ಕಡೆಯಿಂದ ಉಡುಪಿ, ಮೂಡಬಿದ್ರೆ ಕಡೆಗೆ ಹೋಗುವ ಎಲ್ಲಾ ಬಸ್ಸು ಹಾಗೂ ಇತರ ವಾಹನಗಳು ಕೆ ಎಸ್ ಆರ್ ರಸ್ತೆ ಮುಖಾಂತರ ಪಿ ವಿ ಎಸ್. ಲಾಲ್ ಭಾಗ್ ಜಂಕ್ಷನ್ ನಿಂದ ಮುಂದಕ್ಕೆ ಉಡುಪಿ ಕಡೆಗೆ ಸಂಚರಿಸುವುದು. ಕೆ ಎಸ್ ಆರ್ ಟಿ ಸಿ, ಕೆ ಪಿ ಟಿ ಮುಖಾಂತರ ಮೂಡುಬಿದ್ರೆ ಕಡೆಗೆ ಸಂಚರಿಸುವುದು. ಅಂತೆಯೇ ಮತ್ತೂರು, ತಲಪಾಡಿ, ಕಡೆಗೆ ಸಂಚಾರಿಸುವ ಎಲ್ಲಾ ಬಸ್ಸುಗಳು ಹಾಗೂ ಇತರ ವಾಹನಗಳು, ಹಂಪನಕಟ್ಟೆ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಫಳ್ನೀರು ರಸ್ತೆ ಮುಖಾಂತರ ಕಂಕನಾಡಿ, ಕರಾವಳಿ ಜಂಕ್ಷನ್ ಮುಖೇನಾ ಮುಂದುವರಿಯಬೇಕಾಗಿ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ

ಇತ್ತೀಚಿನ ಸುದ್ದಿ

ಜಾಹೀರಾತು