ಇತ್ತೀಚಿನ ಸುದ್ದಿ
ಸ್ವಚ್ಛತಾ ಅಭಿಯಾನ: ಬಿ.ಸಿ.ರೋಡ್ ರಸ್ತೆ ಬದಿ, ರೈಲ್ವೆ ಸ್ಟೇಶನ್, ಪೊಲೀಸ್ ಠಾಣೆ ಸ್ವಚ್ಛತೆ
03/10/2023, 22:58
ಬಂಟ್ವಾಳ(reporterkarnataka.com): ಮೊಡಂಕಾಪು ಕಾರ್ಮೆಲ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಬಂಟ್ವಾಳ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂಸೇವಕರು ಪುರಸಭಾ ಸದಸ್ಯರೊಂದಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆ, ರೈಲ್ವೆ ನಿಲ್ದಾಣ ಹಾಗೂ ಬಿ.ಸಿ. ರೋಡು ಬೀದಿ ಬದಿಗಳ ಸ್ವಚ್ಛತೆಯನ್ನು ಮಾಡಿದರು.