5:25 PM Sunday31 - August 2025
ಬ್ರೇಕಿಂಗ್ ನ್ಯೂಸ್
ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಹಿತ ಆರೋಪಿ ಬಂಧನ Kodagu | ‘ಹುಡುಗಿ, ಆಂಟಿ ಸರ್ವಿಸ್…’ ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ: ಮಡಿಕೇರಿ… Kerala | ವಯನಾಡು ತಮರಶೆರಿ ಘಾಟ್ ಬಳಿ ಭೂಕುಸಿತ: ಬದಲಿ ಮಾರ್ಗಕ್ಕೆ ಸಲಹೆ ಕೆಪಿಟಿಸಿಎಲ್ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಯ್ಕೆ ಪಟ್ಟಿ… ಕೊಚ್ಚಿಯಲ್ಲಿ ಕೌಶಲ್ಯ ಶೃಂಗಸಭೆ | ಪದವಿಗಳಲ್ಲ, ಭವಿಷ್ಯದ ಬಾಗಿಲು ತೆರೆಯುವುದು ಕೌಶಲ್ಯತೆ: ಸಚಿವ… Kodagu | ಗೋಣಿಕೊಪ್ಪದಲ್ಲಿ ಅಸ್ಸಾಂ ವ್ಯಕ್ತಿಯಿಂದ ಅಂಗಡಿ ಶಟರ್ ಮುರಿದು 32 ಹೊಸ… ಮಡಿಕೇರಿ – ವಿರಾಜಪೇಟೆ ಮುಖ್ಯರಸ್ತೆಯ ಮೇಕೇರಿ ಬಳಿ ಮಣ್ಣು ಕುಸಿತ: ವಾಹನ ಸಂಚಾರ… ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ; ಈ ಬಾರಿ ದೇವಿ ದರ್ಶನ ನಿಯಮ… ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:…

ಇತ್ತೀಚಿನ ಸುದ್ದಿ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ ಸ್ವೀಕಾರ: ಜನತಾ ಪರಿವಾರದ ಮಾಜಿ ನಾಯಕನಿಗೆ ಒಲಿದ ಅಧಿಕಾರ

28/07/2021, 11:37

ಬೆಂಗಳೂರು(reporterkarnataka news): ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಪ್ರತಿಜ್ಞೆ ಸ್ವೀಕರಿಸಿದರು. ರಾಜ್ಯಪಾಲ ತಾವರ್ ಚಂದ್ರ ಗೆಹಲೋಟ್ ಅವರು ಪ್ರಮಾಣ ವಚನ ಬೋಧಿಸಿದರು.

ಬುಧವಾರ ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 

ಮಂಗಳವಾರ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ನೂತನ ನಾಯಕನಾಗಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯಿತು. ಜನತಾ ಪರಿವಾರದಲ್ಲಿ ರಾಜಕೀಯ ಜೀವನ ಆರಂಭಿಸಿದ ಬೊಮ್ಮಾಯಿ ಅವರು 2008ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದರು. ನಂತರ ಯಡಿಯೂರಪ್ಪ ಅವರ ಮೊದಲ ಸರಕಾರದಲ್ಲಿ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಡಾ. ವಿ.ಎಸ್. ಆಚಾರ್ಯ ಅವರ ಅಕಾಲಿಕ ನಿಧನದ ಬಳಿಕ ಅವರಿಗೆ ಗೃಹ ಖಾತೆಯ ಜವಾಬ್ದಾರಿ ನೀಡಲಾಯಿತು. ಮೈತ್ರಿ ಸರಕಾರ ಪತನಗೊಂಡು ಬಳಿಕ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಯಡಿಯೂರಪ್ಪ ಸರಕಾರದಲ್ಲಿ ಅವರು ಗೃಹ ಸಚಿವರಾಗಿ ನಿಯುಕ್ತಿಗೊಂಡರು. ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ ಅವರು ಜನತಾ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು