3:16 AM Saturday2 - May 2026
ಬ್ರೇಕಿಂಗ್ ನ್ಯೂಸ್
ಅಂಜನಾದ್ರಿ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನದ ಟಯರ್ ಬ್ಲಾಸ್ಟ್: ಓರ್ವ ಸಾವು, 7… ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡಗೆ… ರಾಜ್ಯದಲ್ಲಿರುವ ಹೊರ ರಾಜ್ಯ ನೋಂದಣಿ ವಾಹನಗಳಿಗೆ ಹೊಸ ತೆರಿಗೆ: ಸುಗ್ರೀವಾಜ್ಞೆ ಜಾರಿ ಕೃಷಿ ಅಧಿಕಾರಿಗಳ ದಾಳಿ: ಅಕ್ರಮ ಯೂರಿಯಾ ದಾಸ್ತಾನು ಪತ್ತೆ; 399 ಬ್ಯಾಗ್ ರಸಗೊಬ್ಬರ… ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ,… Mangaluru | ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಕೈದಿಯಿಂದ ಮೊಬೈಲ್ ನಲ್ಲೇ ಪತ್ನಿಯ… ಮಗಳ ಮದುವೆ ಸಾಲ ತೀರಿಸಲು ಅಳಿಯನ ಮನೆಗೆ ಅತ್ತೆ ಕನ್ನ: 110 ಗ್ರಾಂ… ಹೇಮಾವತಿ ನಾಲೆಗೆ ಉರುಳಿ ಬಿದ್ದ ಕಾರು: ತಾಯಿ- ಮಗು ಸಾವು; ಧರ್ಮಸ್ಥಳದಿಂದ ದೇವನಹಳ್ಳಿಗೆ… ಧಾರವಾಡದಲ್ಲಿ ಟಿಬೇಟಿಯನ್ ಬಿಕ್ಕು ಹತ್ಯೆ: ಬೇರೆ ಕಡೆ ಕೊಲೆ ಮಾಡಿ ಎಸೆದಿರುವ ಶಂಕೆ ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ…

ಇತ್ತೀಚಿನ ಸುದ್ದಿ

25 ವರ್ಷಗಳನ್ನು ಪೂರೈಸಿದ ಮಂಗಳೂರಿನ ‘ಸಿಗ್ನೇಚರ್’: ಅನನ್ಯ ಶಾಪಿಂಗ್ ಅನುಭವ ನೀಡುವ ತಾಣ

29/09/2023, 00:09

ಮಂಗಳೂರು(reporterkarnataka.com): ಮಂಗಳೂರಿನ ಐಕಾನಿಕ್ ಗಾರ್ಮೆಂಟ್ ಶೋರೂಮ್ ‘ಸಿಗ್ನೇಚರ್’, ಶರವು ಗಣಪತಿ ಟೆಂಪಲ್ ರಸ್ತೆಯಲ್ಲಿ ಆರಂಭದಲ್ಲಿ ಪುರುಷರು ಮತ್ತು ಮಕ್ಕಳಿಗಾಗಿ ಪ್ರೀಮಿಯಂ ಬ್ರ‍್ಯಾಂಡ್‌ಗಳು ಹಾಗೂ ಮಹಿಳಾ ಲೇಬಲ್‌ಗಳನ್ನು ಹೊಂದಿರುವ ವಾಣಿಜ್ಯ ಫ್ಯಾಷನ್ ಶೋರೂಮ್ ಆಗಿ 1998ರ ಸೆಪ್ಟೆಂಬರ್ 27ರಂದು ಆರಂಭಗೊಂಡಿತು.

ಪರ್‌ಫ್ಯೂಮ್ಸ್, ಆಭರಣಗಳು, ಪಾದರಕ್ಷೆ ಮತ್ತು ಕನ್ನಡಕಗಳಂತಹ ವೈವಿಧ್ಯಮಯ ಪರಿಕರಗಳೊಂದಿಗೆ ಮಂಗಳೂರಿನ ಮೊದಲ ಶಾಪ್-ಇನ್-ಶಾಪ್ ಶೋರೂಮ್ ಆಗಿತ್ತು. ದೀಪಿಕಾ ಗೋವಿಂದ, ಲತಾ ಪುಟ್ಟಣ್ಣ, ವಿದ್ಯಾ ಸಾಗರ್, ಕೆಕೆ ಕ್ರಿಯೇಷನ್ಸ್ ಮತ್ತು ಕೃಷ್ಣಮಣಿ ಮುಂತಾದ ವಿನ್ಯಾಸಕರ ವಸ್ತುಗಳನ್ನು ‘ಸಿಗ್ನೇಚರ್’ ಹೊಂದಿತ್ತು. ಹೊಸ ಲೇಬಲ್‌ಗಳನ್ನು ಪ್ರಚಾರ ಮಾಡಲು ಫ್ಯಾಷನ್ ಶೋಗಳ ಜೊತೆಗೆ ಕಾಸ್ಟ್ಯೂಮ್ ಆಭರಣಗಳು ಮತ್ತು ಅಲಂಕಾರಿ ಕಲೆಯ ಪ್ರದರ್ಶನಗಳನ್ನು ಇಲ್ಲಿ ನಡೆಸಲಾಗುತ್ತಿತ್ತು.

ಕಾಲಾನಂತರದಲ್ಲಿ, ‘ಸಿಗ್ನೇಚರ್’ ಪುರುಷರ ಉಡುಗೆ ಸಂಗ್ರಹವಾಗಿ ಬದಲಾಯಿತು. ಮೇಕ್‌ ಓವರ್‌ನೊಂದಿಗೆ ಕ್ಯಾಶುಯಲ್, ಪಾರ್ಟಿ ಮತ್ತು ಫಾರ್ಮಲ್ ಉಡುಪಿನ ಸಮಗ್ರ ಶ್ರೇಣಿಯೊಂದಿಗೆ ಆರಾಮದಾಯಕ ಶಾಪಿಂಗ್ ಅನುಭವವನ್ನು ಪ್ರಸ್ತುತಪಡಿಸಿತು. ಶಾಪಿಂಗ್‌ನಲ್ಲಿ ಸುಲಭತೆಯನ್ನು ಒದಗಿಸಲು, ತಮ್ಮ ಗ್ರಾಹಕರಿಗೆ ವಿಶಾಲವಾದ ಪಾರ್ಕಿಂಗ್ ಪ್ರದೇಶವನ್ನು ಲಭ್ಯವಾಗಿಸಲಾಯಿತು.
‘ಪರ್ಸನಲಿ ಸ್ಟೈಲ್ಡ್’ ಎಂಬ ತಮ್ಮ ಟ್ಯಾಗ್‌ಲೈನ್‌ಗೆ ಪೂರಕವಾಗಿ, ಸಿಬ್ಬಂದಿಗಳು ವೈಯಕ್ತಿಕ ಸೇವೆಯನ್ನು ಒದಗಿಸಲು ಬದ್ಧರಾಗಿದ್ದಾರೆ. ಗ್ರಾಹಕರ ಬಣ್ಣದ ಆದ್ಯತೆಯನ್ನು ಪರಿಗಣಿಸಿ ಹೊಸ ಸ್ಟಾಕುಗಳ ಬಗ್ಗೆ ಮಾಹಿತಿ ನೀಡಿ ತಮ್ಮ ಗ್ರಾಹಕರಿಗೆ ಅನನ್ಯ ಶಾಪಿಂಗ್ ಅನುಭವವನ್ನು ನೀಡಲು ಶ್ರಮಿಸಿದ್ದಾರೆ.
25 ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ‘ಸಿಗ್ನೇಚರ್’ ಯಶಸ್ಸಿಗೆ ಸಹಕರಿಸಿದ ಗ್ರಾಹಕರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ವಾರದ ಸಂಭ್ರಮವನ್ನು ಯೋಜಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು