8:21 PM Friday4 - July 2025
ಬ್ರೇಕಿಂಗ್ ನ್ಯೂಸ್
ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು?

ಇತ್ತೀಚಿನ ಸುದ್ದಿ

ಗುಡ್ಡ ಚಾಮುಂಡೇಶ‌್ವರಿ ಸೇವಾ ಟ್ರಸ್ಟ್ ನಿಂದ 14ನೇ ವರ್ಷದ ಗಣೇಶೋತ್ಸವ ವೈಭವ

28/09/2023, 10:53

ಬಂಟ್ವಾಳ(reporterkarnataka.com): ಗಣೇಶೋತ್ಸವ ಸಮಿತಿ, ಗುಡ್ಡ ಚಾಮುಂಡೇಶ‌್ವರಿ ಸೇವಾ ಟ್ರಸ್ಟ್ ಇದರ ವತಿಯಿಂದ ಏರ್ಪಡಿಸಲಾದ 14ನೇ ವರ್ಷದ ಶೀ ಗಣೇಶೋತ್ಸವ ವೈಭವದಿಂದ ನಡೆಯಿತು.


ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಭಾಷಣ ಮಾಡಿದರು. ನಿವೃತ್ತ ಯೋಧ ಕ್ಯಾಪ್ಟನ್ ಬೃಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್, ನ್ಯಾಯವಾದಿ ಉಮೇಶ್ ಏನಾಜೆ, ಮುಖ್ಯ ಶಿಕ್ಷಕ ಬಾಬು ಪೂಜಾರಿ ಕೊಪ್ಪಲ, ನೇರಳಕಟ್ಟೆ ಸೊಸೈಟಿ ಕಾರ್ಯನಿರ್ಹಣಾಧಿಕಾರಿ ಯಶೋದಾ ನೇರಳಕಟ್ಟೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮೋನಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಶಿವಕುಮಾರ ಜೋಗಿಬೆಟ್ಟು, ಸೇವಾ ಟ್ರಸ್ಟ್ ಅಧ್ಯಕ್ಷ ಮಾಧವ ಕುಲಾಲ್,ಹರೀಶ್ ರೈ ಪಾನೂರು, ಸುಧಾಕರ್ ಪಾನೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜಾರಾಮ ಕಾಡೂರು ಸ್ವಾಗತಿಸಿದರು. ದಿವಾಕರ ಶಾಂತಿಲ ವಂದಿಸಿದರು. ಯತಿರಾಜ ನಿರೂಪಿಸಿದರು.
ನಾಸಿಕ್ ಬ್ಯಾಂಡ್ ತಂಡ, ಪೆರಾಜೆಯ ಕುಣಿತ ಭಜನೆ ತಂಡವನ್ನು ಅಭಿನಂದಿಸಲಾಯಿತು. ಜೋಡುಕಲ್ಲು ಕಲಾವಿದರಿಂದ ತುಂಗಭದ್ರ ನಾಟಕ ಪ್ರದರ್ಶನಗೊಂಡಿತು.

ಇತ್ತೀಚಿನ ಸುದ್ದಿ

ಜಾಹೀರಾತು