ಇತ್ತೀಚಿನ ಸುದ್ದಿ
ವಿಜಯ ನಗರದ ಬಂಟರ ಸಂಘದಲ್ಲಿ ಅಷ್ಟೆಮಿದ ಐಸಿರ ಮೊಸರು ಕುಡಿಕೆ ಉತ್ಸವ: ಮಡಕೆ ಒಡೆದ ಸ್ಪೀಕರ್ ಖಾದರ್
24/09/2023, 21:21
ಬೆಂಗಳೂರು(reporterkarnataka.com): ತುಳುನಾಡ ಜವನೆರ್ ಬೆಂಗಳೂರು ಇವರ ವತಿಯಿಂದ ಅಷ್ಟೆಮಿದ ಐಸಿರ ಮೊಸರು ಕುಡಿಕೆ ಉತ್ಸವ ಸೆಪ್ಟೆಂಬರ್ 24 ರಂದು ವಿಜಯ ನಗರದ ಬಂಟರ ಸಂಘದಲ್ಲಿ ಜರುಗಿತು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಡಿಕೆ ಒಡೆಯುವ ಮೂಲಕ ಅಷ್ಟಮಿಯ ವೈಭವವನ್ನು ಮತ್ತೆ ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಸ್ಪೀಕರ್ ಅವರು ಬೆಂಕಿಯ ತಾಲೀಮು ಪ್ರದರ್ಶನ ಮಾಡಿದರು.
ಸರಳ ಸಜ್ಜನ, ಸಭಾಧ್ಯಕ್ಷ ಯು. ಟಿ ಖಾದರ್ ಅವರಿಗೆ ಅಭಿಮಾನಿಗಳ ಅಭಿಮಾನದ ಸುರಿಮಳೆಗರೆಯಲಾಯಿತು.
ದ. ಕ. ಜಿಲ್ಲೆಯ ಯುವಕರಿಂದ ಬೆಂಗಳೂರಿನಲ್ಲಿ ಪ್ರೀತಿಯಪೂರ್ವಕ ಸ್ವಾಗತ ನಡೆಯಿತು.