4:20 PM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಜಿಎಲ್ ಬಿಸಿ ಕಾಲುವೆಗೆ ನೀರು ಬಿಡಲು ಆಗ್ರಹಿಸಿ ರೈತ ಸಂಘದಿಂದ ಚಿಕ್ಕೋಡಿ- ಮೀರಜ್ ಹೆದ್ದಾರಿಯಲ್ಲಿ ಪ್ರತಿಭಟನೆ

23/09/2023, 08:44

ಬೆಳಗಾವಿ(reporterkarnataka.com): ಜಿಎಲ್ ಬಿಸಿ ಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ನೂರಾರು ರೈತರು ಚಿಕ್ಕೋಡಿ- ಮಿರಜ ರಾಜ್ಯ ಹೆದ್ದಾರಿ ಹತ್ತಿರ ಕೇರೂರ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.


ಚಿಕ್ಕೋಡಿ- ಮೀರಜ್ ರಾಜ್ಯ ಹೆದ್ದಾರಿ ಬಂದ್ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ಕಾಲುವೆಗೆ ನೀರು ಹರಿಸದೇ ಇರುವ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಮಾತನಾಡಿ, ಚಿಕ್ಕೋಡಿ ತಾಲೂಕಿನ ಕೇರೂರ, ಕಾಡಾಪೂರ, ಅರಬ್ಯಾನವಾಡಿ, ರೂಪಿನಾಳ ನನದಿವಾಡಿ ಸೇರಿದಂತೆ ಹತ್ತಾರು ಗ್ರಾಮದ ರೈತರಿಗೆ ಅನುಕೂಲವಾಗುವ ಜಿಎಲ್ ಬಿಸಿ ಕಾಲುವೆಗೆ ನೀರು ಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಡಲಾಗಿತ್ತು. ಆದರೂ ಕಾಲುವೆಗೆ ನೀರು ಹರಿಯದೇ ಇರುವ ಕಾರಣ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ನೀರು ಬಿಡುವ ತನಕ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಅಧಿಕಾರಿ ನಾಗೇಶ ಕೋಲಕಾರ ಮಾತನಾಡಿ, ನೀರಾವರಿ ಸಲಹಾ ಸಮಿತಿ ಇದೆ. ಬೇಡಿಕೆ ಅನುಗುಣವಾಗಿ ನೀರು ಬಿಡಲು ಆದೇಶ ಮಾಡುತ್ತಾರೆ. ಬರಗಾಲ ಇರುವುದರಿಂದ ವ್ಯತ್ಯಾಸ ಆಗಿದೆ. ಸಲಹಾ ಸಮಿತಿ ಒಪ್ಪಿಗೆ ಕೊಟ್ಟರೆ ಇವತ್ತೆ ನೀರು ತರುತ್ತೇನೆ. ಕಿನಾಲ ಸ್ವಚ್ಚತೆ ಮಾಡಿ ನೀರು ತರಲಾಗುತ್ತದೆ. ಜಿಎಲ್ ಬಿಸಿ ಕಾಲುವೆಗೆ ನೀರು ಬಿಟ್ಟರೆ ಎಂಟು ದಿನಗಳ ಒಳಗಾಗಿ ಕೇರೂರ ಗ್ರಾಮಕ್ಕೆ ನೀರು ತರುತ್ತೇನೆ. ಇದನ್ನು ಒಪ್ಪದ ರೈತ ಮುಖಂಡ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಮಂತಿಗಳು ಬರಲಿ ನೀರಿನ ತೀರ್ಮಾನ ತಕ್ಷಣವೇ ಆಗಬೇಕು ಎಂದರು.
ಕೊನೆಗೆ ಚಿಕ್ಕೋಡಿ ಎಸಿ ಮಾಧವ ಗಿತ್ತೆ ಪ್ರತಿಭಟನಾ ಸ್ಥಳಕ್ಕೆ ಬಂದು ಚರ್ಚೆಗೆ 8 ದಿನ ಕಾಲಾವಕಾಶ ಕೇಳಿದರು. ರೈತ ಮುಖಂಡ ಮಂಜುನಾಥ ಪರಗೌಡರು ಮಾತನಾಡಿ ಸಭೆ ನಡೆಸಿ ತುರ್ತು ಪರಿಸ್ಥಿತಿಗೆ ಜಿ ಆರ್ ಬಿ ಸಿ. ಕಾಲುವೆಯಿಂದ ನೀರು ಕೊಡಿ ಮತ್ತು 8 ದಿನಗಳಲ್ಲಿ ಕಲ್ಲೊಳ ಬ್ಯಾರೇಜ್ ನಿಂದ ಬಂದ ಪಾಯಿಪ ಲಾಯಿನ ಮುಖಾಂತರ ಇಂಜಿಯಾರ್ ಜೊತೆ ಚರ್ಚೆ ನಡೆಸಿ ಜಿ ಎಲ್ ಬಿ ಸಿ ಕಾಲುವೆಗೆ ನೀರು ಕೊಡಬೇಕು. ಇಲ್ಲವಾದಲ್ಲಿ ಮತ್ತೆ 8 ದಿನಗಳಲ್ಲಿ ಜಿಲ್ಲೆಯ ರೈತರನ್ನು ಸೇರಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿ ಚಳುವಳಿ ಕೈ ಬಿಟ್ಟರು. ಇದೇ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಶಿ ಗದಾಡಿ. ಅಥಣಿ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ, ಪ್ರತಾಪ ಪಾಟೀಲ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಬಾಳಗೌಡ ಪಾಟೀಲ, ಶಂಕರ ಹೆಗಡೆ, ಜ್ಯೋತಿಬಾ ಮಗದುಮ, ಗುರುನಾಥ ಹೆಗಡೆ, ಬಾಪು ಕುತ್ತೆ, ಶಿವಾನಂದ ಕೋಳಿ,ಬಜ್ಯೋತಿ ಪಾಟೀಲ್.
ಕೆಂಚಗೌಡ ಪಾಟೀಲ, ಮಲ್ಲು ಕಾನಡೆ, ದುಂಡಪ್ಪ ಹಿಂಗ್ಲಜೆ ಮುಂತಾದವರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು