6:42 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಎಚ್‍ಡಿಎಫ್‍ಸಿ ‘ಚಕ್ರಗಳ ಮೇಲೆ ಬ್ಯಾಂಕ್’ ಲೋಕಾರ್ಪಣೆ

21/09/2023, 20:26

ಮಂಗಳೂರು(reporterkarnataka.com): ಎಚ್.ಡಿ.ಎಫ್.ಸಿ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುವ ಉದ್ದೇಶದಿಂದ “ಚಕ್ರಗಳ ಮೇಲೆ ಬ್ಯಾಂಕ್” ಯೋಜನೆಗೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು.


ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಅವರು, ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್ ಗಳ ಉಗಮ ಸ್ಥಳವಾಗಿದ್ದು ಎಚ್.ಡಿಎಫ್ ಬ್ಯಾಂಕ್ ಚಕ್ರಗಳ ಮೇಲೆ ಬ್ಯಾಂಕ್ ಸೇವೆಯ ಮೂಲಕ ಹಳ್ಳಿ ಹಳ್ಳಿಗಳ ಜನರನ್ನು ತಲುಪಲು ಮುಂದಾಗಿರುವುದು ಶ್ಲಾಘನೀಯ. ಈ ಮೂಲಕ ಹಳ್ಳಿಭಾಗಗಳ ಜನರು ಬ್ಯಾಂಕ್ ಸೇವೆಯನ್ನು ಪಡೆಯುವಂತಾಗಲಿ. ಬಿಸಿ ರೋಡ್, ವಿಟ್ಲ, ಉಜಿರೆ, ಉಪ್ಪಿನಂಗಡಿ, ಪುತ್ತೂರು ಮತ್ತಿತರ 24 ರಿಂದ 40 ಕಿಲೋಮೀಟರ್ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಈ ವಾಹನ ಸೇವೆ ಒದಗಿಸಲಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ವಾಹನದಲ್ಲಿ ಎಟಿಎಂ ಮಾತ್ರವಲ್ಲದೆ ನೂತನ ಅಕೌಂಟ್ ತೆರೆಯುವುದರಿಂದ ಹಿಡಿದು ನಗದು ಠೇವಣಿ, ಡಿಪಾಸಿಟ್, ಲೋನ್ ಸೌಲಭ್ಯ ಕೂಡ ಲಭ್ಯವಿದೆ ಬ್ಯಾಂಕ್ ನಲ್ಲಿ ಲಭ್ಯ ವಿರುವ 21 ರೀತಿಯ ಎಲ್ಲಾ ಸೌಲಭ್ಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್‍ನ ಸರ್ಕಲ್ ಹೆಡ್ ಮತ್ತು ಹಿರಿಯ ಉಪಾಧ್ಯಕ್ಷ ಶುಭಂಕರ್ ಬೋಸ್, ದಕ್ಷಿಣ ಕನ್ನಡ ಕ್ಲಸ್ಟರ್ ಹೆಡ್ ಚಂದನ್ ಶಿವಣ್ಣ, ಉಡುಪಿ ಕ್ಲಸ್ಟರ್ ಮುಖ್ಯಸ್ಥ ವಾಸುದೇವ ಪಿ, ಬಿ.ಸಿ.ರೋಡ್-ಬಂಟ್ವಾಳ ಶಾಖ ಮುಖ್ಯಸ್ಥ ಪ್ರಖ್ಯಾತ್ ಶೆಟ್ಟಿ, ಪುತ್ತೂರು ಶಾಖಾ ವ್ಯವಸ್ಥಾಪಕ ಅನೀಶ್ ಶೆಟ್ಟಿ, ಸುರತ್ಕಲ್ ಶಾಖಾ ವ್ಯವಸ್ಥಾಪಕ ಉದಯ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು