8:00 PM Friday4 - July 2025
ಬ್ರೇಕಿಂಗ್ ನ್ಯೂಸ್
ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ

ಇತ್ತೀಚಿನ ಸುದ್ದಿ

16 ಎಎಸ್‌ಐಗಳಿಗೆ ಪಿಎಸ್‌ಐಗಳಾಗಿ ಬಡ್ತಿ: ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ

20/09/2023, 15:36

ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಬಡ್ತಿ ನೀಡಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಪಿಎಸ್‌ಐ ಬಡ್ತಿಯಾಗಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನವೀನ್ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ , ಸಿಎಸ್ಪಿಯ ಆನಂದ ಬಿ. ಉತ್ತರ ಸಂಚಾರ ಠಾಣೆಗೆ, ಗ್ರಾಮಾಂತರ ಠಾಣೆಯ ವಿನೋದ್ ಕೊಣಾಜೆ ಠಾಣೆಗೆ, ಪಣಂಬೂರು ಠಾಣೆಯ ಈಶ್ವರ ಸ್ವಾಮಿ ಕದ್ರಿ ಸಂಚಾರ ಠಾಣೆಗೆ, ಕದ್ರಿ ಠಾಣೆಯ ಶಾಂತಪ್ಪ ಜಿ. ಕಂಕನಾಡಿ ನಗರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಕೃಷ್ಣಪ್ಪ ಮೂಡುಬಿದಿರೆ ಠಾಣೆಗೆ, ಉತ್ತರ ಠಾಣೆಯ ಶಿವಪ್ಪ ಗೌಡ ಅದೇ ಠಾಣೆಗೆ ನಿಯೋಜನೆಗೊಂಡಿದ್ದಾರೆ.

ಉರ್ವ ಠಾಣೆಯ ಉಲ್ಲಾಸ್ ಪಾಂಡುರಂಗ ಬರ್ಕೆ ಠಾಣೆಗೆ, ಉತ್ತರ ಠಾಣೆಯ ಓಂ ದಾಸ್ ಸೆನ್ ಠಾಣೆಗೆ, ಐಎಸ್ಡಿಯ ರವಳೇಂದ್ರ ಗ್ರಾಮಾಂತರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಶಶಿಧರ ಶೆಟ್ಟಿ ಸುರತ್ಕಲ್ ಠಾಣೆಗೆ, ಉಳ್ಳಾಲ ಠಾಣೆಯ ಪ್ರಾಣೇಶ್ ಕುಮಾರ್ ಬಿ. ಅದೇ ಠಾಣೆಗೆ, ಸೆನ್ ಠಾಣೆಯ ಮೋಹನ್ ಅದೇ ಠಾಣೆಗೆ, ಸಿಸಿಬಿಯ ಹರೀಶ್ ಪದವಿನಂಗಡಿ ಸಿಎಸ್ಬಿಗೆ, ದಕ್ಷಿಣ ಠಾಣೆಯ ಪುರಂದರ ಬಿ.ಪಿ. ಸಿಸಿಆರ್ಬಿಗೆ ಪಿಎಸ್‌ಐ ಹುದ್ದೆಗೆ ನೇಮಕ ಮಾಡಿ ವರ್ಗಾಯಿಸಲಾಗಿದೆ.
ಈ ಹಿಂದಿನ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹಾಗೂ ಕುಲದೀಪ್ ಕುಮಾರ್ ಜೈನ್ ಅವರು ಹಲವು ವರ್ಷ ಗಳಿಂದ ಬಾಕಿ ಉಳಿದಿದ್ದ ಎಎಸ್‌ಐಗಳಿಗೆ ಬಡ್ತಿ ನೀಡಲು ಪ್ರಯತ್ನಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ನೂತನ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಅಧಿಕಾರ ಸ್ವೀಕರಿಸಿ 9 ದಿನಗಳಲ್ಲಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು