9:43 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ನೂತನ ಸಂಪುಟ: ಕಾರ್ಕಳದ ಸುನಿಲ್, ಹಾಸನದ ಪ್ರೀತಂ ಗೌಡ ಸೇರಿದಂತೆ 12 ಹೊಸ ಮುಖ?: ಹಾಗಾದರೆ ಹಳೆಬರಲ್ಲಿ ಯಾರಿಗೆಲ್ಲ ಕೊಕ್? 

27/07/2021, 07:54

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಯಡಿಯೂರಪ್ಪ ರಾಜೀನಾಮೆ ಬಳಿಕ ಹೊಸ ಮುಖ್ಯಮಂತ್ರಿ ಹಾಗೂ ಸಂಪುಟದ ಕುರಿತು ಚರ್ಚೆ ಆರಂಭವಾಗಿದೆ. ಸಿಎಂ ಪಟ್ಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಆರಂಭಗೊಂಡು ಮುರುಗೇಶ್ ನಿರಾಣಿ ವರೆಗೆ ಹೆಸರು ಕೇಳಿಬರುತ್ತಿದೆ. ಜತೆಗೆ ಹೊಸ ಸಂಪುಟದಲ್ಲಿ ಹಿಂದಿನ ಸಂಪುಟದಲ್ಲಿದ್ದ ಹಲವರಿಗೆ ಕೊಕ್ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ಸಂಪುಟದಲ್ಲಿದ್ದ ಸಚಿವರುಗಳ ಪೈಕಿ ಡಜನಿಗೂ ಅಧಿಕ ಮಂದಿಯನ್ನು ಕೈಬಿಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕೇಂದ್ರ ಸಂಪುಟದಲ್ಲಿ 

ಮಾಡಿದ ಮೇಜರ್ ಸರ್ಜರಿಯಂತೆ ರಾಜ್ಯದಲ್ಲಿಯೂ ಮಾಡಲಾಗುತ್ತದೆ. ಕೇಂದ್ರದಲ್ಲಿ

ಹೊಸ ಮುಖಗಳಿಗೆ ಅವಕಾಶ ನೀಡಿದಂತೆ ರಾಜ್ಯದಲ್ಲಿಯೂ ಭಾರಿ ಬದಲಾವಣೆಗಳಾಗಲಿವ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕೈಬಿಡುವ ಸಚಿವರುಗಳ ಪಟ್ಟಿಯಲ್ಲಿ ಶಶಿಕಲಾ ಜೊಲ್ಲೆ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆ ಸಚಿವರಾದ ಸುರೇಶ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಪ್ರಭು ಚೌವ್ಹಾಣ್, ಸಿ.ಸಿ.ಪಾಟೀಲ್, ಶ್ರೀಮಂತ್ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಕೆ.ಸಿ.ನಾರಾಯಣ ಗೌಡ ಮೊದಲಾದವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುರೇಶ್ ಕುಮಾರ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಅವರು ಕೊಕ್ ಲಿಸ್ಟ್ ನಲ್ಲಿದ್ದರೂ ಸರಳತೆ ಹಾಗೂ ಪ್ರಾಮಾಣಿಕತೆಗಾಗಿ ಅವರಿಗೆ ಹೊಸ ಸಂಪುಟದಲ್ಲಿ ಮತ್ತೊಮ್ಮೆ ಸ್ಥಾನ ನೀಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ. ಕೋಟ ಶ್ರೀನಿವಾಸ ಪೂಜಾರಿಯಂತೂ ತುಂಬಾ ಸರಳ, ಸಜ್ಜನ ರಾಜಕಾರಣಿ ಎಂದೇ ಪ್ರಖ್ಯಾತರಾದವರು. ಸಚಿವರಾದರೂ ಮಂತ್ರಿಗಳಿಗೆ ಸಿಗುವ ಬಂಗ್ಲೆಯನ್ನು ತ್ಯಜಿಸಿ ಶಾಸಕರ ಭವನದಲ್ಲಿರುವ ಅತ್ಯಂತ ಸರಳ ರಾಜಕಾರಣಿ. ಹಾಗೆ ಸುರೇಶ್ ಕುಮಾರ್ ಅವರು ಕೂಡ ಉತ್ತಮ ರಾಜಕಾರಣಿ ಎಂದೇ ಪ್ರಖ್ಯಾತರಾದವರು.

ಇನ್ನು ಹೊಸ ಸಂಪುಟದಲ್ಲಿ ಕಾರ್ಕಳದ ಸುನಿಲ್ ಕುಮಾರ್, ಹಾಸನದ ಪ್ರೀತಂ ಗೌಡ,ಎಸ್.ಎ.ರಾಮದಾಸ್, ರಾಜುಗೌಡ, ಪಿ.ರಾಜೀವ್, ಎಂ.ಪಿ.ರೇಣುಕಾಚಾರ್ಯ, ಹಾಲಪ್ಪ ಆಚಾರ್, ಎಂ.ಪಿ.ಕುಮಾರಸ್ವಾಮಿ, ರೂಪಾಲಿ ನಾಯ್ಕ್ ಮೊದಲಾದವರಿಗೆ ನೂತನ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು