ಇತ್ತೀಚಿನ ಸುದ್ದಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಭೀಕರ ಬೆಂಕಿ ಅನಾಹುತ; ಗೋದಾಮು ಮತ್ತು 8 ಮನೆಗಳು ಭಸ್ಮ
18/09/2023, 17:16
ಬೆಂಗಳೂರು(reporterkarnataka.com): ನಗರದ ಚಾಮರಾಜಪೇಟೆಯ ಅನಂತಪುರದ ಬಳಿ
ಸಿಲಿಂಡರ್ ಸ್ಫೋಟಗೊಂಡು ಗೋದಾಮು ಮತ್ತು 8 ಮನೆಗಳು ಭಸ್ಮಗೊಂಡಿರುವ ಘಟನೆ ನಡೆದಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಬೆಂಗಳೂರಿನ ವಿನಾಯಕ ಸಿನೆಮಾ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದ್ದು,
ಸಿಲಿಂಡರ್ ಸ್ಪೋಟದ ಭೀಕರತೆಗೆ ಅಲಂಕಾರಿಕ ವಸ್ತುಗಳ ಗೋದಾಮು ಮತ್ತು 8 ತಗಡಿನ ಶೀಟ್ ಮನೆಗಳು ಭಸ್ಮವಾಗಿವೆ. ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳ ಬೆಂಕಿ ನದಿಸುವ ಕಾರ್ಯ ಮಾಡಿದ್ದಾರೆ. ಈ ಅವಘಡದಲ್ಲಿ ಗೋದಾಮು ಸೇರಿದಂತೆ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದ್ದು, ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿನಾಯಕ ಸಿನಿಮಾ ಥಿಯೇಟರ್ ಎದುರುಗಡೆ ಇರುವ ಗೋದಾಮಿಗೆ ಬೆಂಕಿ ತಲುಗಿದ ಹಿನ್ನೆಲೆ ಸಿಲಿಂಡರ್‌ಗಳು ಬ್ಲಾಸ್ಟ್ ಆಗಿರಬಹುದು ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳ ಗೋದಾಮಿಗೆ ಬೆಂಕಿ ತಗುಲಿದ್ದು, ಬೆಂಕಿ ತಗಲುತ್ತಿದ್ದಂತೆ ಅದರ ಪಕ್ಕದಲ್ಲಿರುವ ಸುಮಾರು 8 ಶೀಟ್ ಮನೆಗಳಿಗೂ ಬೆಂಕಿ ಆವರಿಸಿದೆ ಎನ್ನಲಾಗಿದೆ.