ಇತ್ತೀಚಿನ ಸುದ್ದಿ
ಆಂಧ್ರಪ್ರದೇಶ ರಸ್ತೆ ದುರಂತ: ಮೃತಪಟ್ಟ ಅಥಣಿಯ ಒಂದೇ ಕುಟುಂಬದ ನಾಲ್ವರು ಸೇರಿದಂತೆ 5 ಮಂದಿಯ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಗ್ರಾಮಸ್ಥರ ಆಕ್ರಂಧನ
18/09/2023, 12:11
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.ಕಂ
ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ವಾಪಸ್ ಬರುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಒಂದೇ ಕುಟುಂಬದ 5 ಮಂದಿಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಸೆಪ್ಟೆಂಬರ್ 15 ರಂದು ಲಾರಿ ಮತ್ತು ಕ್ರೂಜರ್ ವಾಹನ ಡಿಕ್ಕಿ ಹೊಡೆದು ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ, ಕಡಪ-ಚಿತ್ತೂರು ರಸ್ತೆಯಲ್ಲಿ ಅಥಣಿ ಮೂಲದ ಒಂದೇ ಕುಟುಂಬದ ನಾಲ್ವರು ಹಾಗೂ ಅದೇ ಗ್ರಾಮದ ಇನ್ನೊಬ್ಬರು ಒಟ್ಟು 5 ಜನ ಸಾವನ್ನಪ್ಪಿದ್ದರು.
ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ಬರುವಾಗ
ಈ ಘೋರ ದುರಂತ ಸಂಭವಿಸಿತ್ತು. ಅಪಘಾತದಲ್ಲಿ ಐದು ಜನ ಸಾವು ಸಂಭವಿಸಿ 11 ಜನರಿಗೆ ಗಾಯಗೊಂಡಿದ್ದರು. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಶೋಭಾ ಆಜೂರ (36), ಮಗಳು ಅಂಬಿಕಾ ಆಜೂರ(14) ಹನುಮಂತ ಆಜೂರ (42)ಹಾಗೂ ಪತ್ನಿ ಮಹಾನಂದಾ ಆಜೂರ(32), ಕ್ರೂಸರ್ ವಾಹನ ಚಾಲಕ ಹನುಮಂತ ಜಾಧವ್ ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ದುಃಖ ಮಡುಗಟ್ಟಿತ್ತು. ದೂರದ ಊರಿಗೆ ಹೋದ ಕುಟುಂಬ ಹೆಣವಾಗಿ ಮರಳಿ ಬಂದದ್ದು ದುರಂತ. ಆಜೂರು ಕುಟುಂಬದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮುಗಿಸಿದ್ದಾರೆ. ಅದೇ ಅಪಘಾತದಲ್ಲಿ
ಗಂಭೀರ ಗಾಯಗೊಂಡ ಕಸ್ತೂರಿ ಎಂಬುವವರು ಬೆಂಗಳೂರು ಆಸ್ಪತ್ರೆಯಿಂದ ಬೆಳಗಾವಿಗೆ ಬರುವಾಗ ರಾತ್ರಿ ರಸ್ತೆ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದರು. ಅಂತ್ಯಕ್ರಿಯೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ್ ಸವದಿ ಹಾಗೂ ಮಾಜಿ ಶಾಸಕ ಕುಮಠಳ್ಳಿ ಬಾಗಿಯಾಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ.